ʼನಾವು ವಿರೋಧಿಗಳಾಗಿದ್ದೇವೆ. ಅಂತೆಯೇ ಸ್ಪರ್ಧೆ ಮಾಡುತ್ತೇವೆʼ: ಅಮಿತ್ ಶಾ – Kannada News Now


India

ʼನಾವು ವಿರೋಧಿಗಳಾಗಿದ್ದೇವೆ. ಅಂತೆಯೇ ಸ್ಪರ್ಧೆ ಮಾಡುತ್ತೇವೆʼ: ಅಮಿತ್ ಶಾ

ನವದೆಹಲಿ: ಎಲ್​ಜೆಪಿ ಪಕ್ಷ ಕೇಂದ್ರದ ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ರೂ ಬಿಹಾರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ಅದ್ರಂತೆ, ಬಿಹಾರದಲ್ಲಿ ಈಗ ನಾವು ಎಲ್​ಜೆಪಿ ಪಕ್ಷದ ವಿರೋಧಿಗಳಾಗಿದ್ದೇವೆ. ಅಂತೆಯೇ ಸ್ಪರ್ಧೆ ಮಾಡುತ್ತೇವೆ” ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

“ನಾವು ಎಲ್​ಜೆಪಿ ಜೊತೆ ಹಲವು ಬಾರಿ ಮಾತುಕತೆ ನಡೆಸಿ ನ್ಯಾಯಯುತವಾಗಿ ಸೀಟು ಹಂಚಿಕೆ ಮಾಡುವ ಭರವಸೆ ನೀಡಿದ್ದೆವು. ಆದರೂ ಎಲ್​ಜೆಪಿ ಸಹಮತಕ್ಕೆ ಬರದೆ ಏಕಾಂಗಿ ಹೋರಾಟದ ನಿರ್ಧಾರ ಮಾಡಿತು. ಜೆಡಿಯು ಕೂಡ ಎಲ್​ಜೆಪಿಗೆ ಒಳ್ಳೆಯ ಸಂಖ್ಯೆಯ ಸೀಟು ಬಿಟ್ಟುಕೊಡಲು ತಯಾರಿತ್ತು. ತಾನೂ ಕೂಡ ಚಿರಾಗ್ ಪಾಸ್ವಾನ್ ಜೊತೆ ವೈಯಕ್ತಿಕವಾಗಿಯೂ ಮಾತನಾಡಿದ್ದೆ” ಎಂದು ಶಾ ಹೇಳಿದ್ದಾರೆ.

ಇನ್ನು “ಮೈತ್ರಿಕೂಟ ಯಾಕೆ ಮುರಿದುಬಿತ್ತು ಎಂಬುದನ್ನ ಬಿಹಾರದ ಜನರು ಅರ್ಥ ಮಾಡಿಕೊಂಡಿದ್ದಾರೆ. ಚುನಾವಣೆಯ ನಂತರ ಎಲ್​ಜೆಪಿ ಮತ್ತೆ ಒಂದುಗೂಡುತ್ತಾ ಎಂಬುದನ್ನು ಕಾದುನೋಡಬೇಕು. ಆದರೆ, ಈಗ ನಾವು ವಿರೋಧಿಗಳಾಗಿದ್ದೇವೆ. ಅಂತೆಯೇ ಸ್ಪರ್ಧೆ ಮಾಡುತ್ತೇವೆ” ಎಂದು ಶಾ ಹೇಳಿದ್ದಾರೆ.
error: Content is protected !!