ಬೆಂಗಳೂರು: ಮಾದಕ ವಸ್ತು ಕಳ್ಳಸಾಗಣೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಸಮ್ಮೇಳನ ನಡೆಯುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣ ಮಾಡಿದ್ದಾರೆ. ಮಾದಕ ವ್ಯಸನ ಮುಕ್ತ ಭಾರತ ನಿರ್ಮಾಣದ ಗುರಿ ಹೊಂದಿದ್ದೇವೆ. ಮಾದಕ ವಸ್ತುಗಳ ನಿಯಂತ್ರಣ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು. ಈ ಹಿಂದಿನ ಎಲ್ಲಾ ಸರ್ಕಾರಗಳು ನಿಯಂತ್ರಿಸುವಲ್ಲಿ ವಿಫಲವಾಗಿದೆ. ದೇಶದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕೇಂದ್ರ ಬದ್ಧವಾಗಿದೆ. ಮಾದಕ ವಸ್ತು ಮುಕ್ತ ಭಾರತಕ್ಕೆ ಪ್ರಧಾನಿ ಮೋದಿ ಸರ್ಕಾರ ಪಣ ತೊಟ್ಟಿದೆ ಎಂದರು.
ಮಾದಕ ವಸ್ತು ಮುಕ್ತ ಅಭಿಮಾಯನವನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಸದ್ಯದ ದಿನಗಳಲ್ಲಿ ಕೇಂದ್ರದ ನೀತಿಯಿಂದ ಎಲ್ಲಾ ಬದಲಾಗುತ್ತಿದೆ. ಮೊದಲು ದೇಶದಲ್ಲಿ ಮಾದಕ ಲೋಕದ ಜಾಲ ಬಹುಮಟ್ಟಿಗೆ ಇತ್ತು. ಆದರೆ ಇದೀಗ ಮಾದಕ ವಸ್ತುಗಳ ಬಳಕೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
BREAKING NEWS: ಮಹಿಳೆಯನ್ನು ತಳ್ಳಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತನಿಗೆ ಸಿದ್ದರಾಮಯ್ಯ ಕಾಪಳಮೋಕ್ಷ
BIG NEWS : ಬಂಟ್ವಾಳದಲ್ಲಿ ನಿರ್ಮಾಣವಾಯ್ತು ಸಾಮರಸ್ಯದ ಮಸೀದಿ, ನಿರ್ಮಾಣಕ್ಕೆ ಮರ ನೀಡಿದ ಹಿಂದೂಗಳು | Mangaluru