ಟರ್ಕಿ : ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಭಾರೀ ಅನಾಹುತವನ್ನು ತೋರಿಸುವ ಅನೇಕ ಹೃದಯ ವಿದ್ರಾವಕ ವೀಡಿಯೊಗಳು ವೈರಲ್ ಆಗಿವೆ. ಅದರಲ್ಲೂ ಪಕ್ಷಿಗಳ ಗುಂಪೊಂದು ಅಸ್ತವ್ಯಸ್ತವಾಗಿ ಹಾರುವ ಅಸಾಮಾನ್ಯ ವೀಡಿಯೊ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ತ್ವರಿತವಾಗಿ ವೈರಲ್ ಆಗುತ್ತಿದೆ. ವೀಡಿಯೋ ಟರ್ಕಿಯದ್ದು ಎಂದು ಹೇಳಿಕೊಂಡಿದ್ದು, ಭೂಕಂಪದ ಮೊದಲು ಪಕ್ಷಿಗಳು ಚಡಪಡಿಸಿಕೊಂಡು ಹಾರುತ್ತಿದೆ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
🚨In Turkey, strange behavior was observed in birds just before the earthquake.👀#Turkey #TurkeyEarthquake #Turkish pic.twitter.com/yPnQRaSCRq
— OsintTV📺 (@OsintTV) February 6, 2023
ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಮೂರು ವಿನಾಶಕಾರಿ ಭೂಕಂಪಗಳ ನಂತರ ಮಂಗಳವಾರ ಮಧ್ಯ ಟರ್ಕಿ ಪ್ರದೇಶದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸಾವಿನ ಸಂಖ್ಯೆ 4,000 ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಇನ್ನೂ ಸಾವಿರಾರು ಜನರು ಗಾಯಗೊಂಡಿದ್ದಾರೆ ಮತ್ತು ಬದುಕುಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಭಾರತ ಸೇರಿದಂತೆ ಅನೇಕ ದೇಶಗಳು ಸರಬರಾಜು ಮತ್ತು ಪರಿಹಾರ ತಂಡಗಳನ್ನು ಕಳುಹಿಸುತ್ತಿವೆ. ರಕ್ಷಣಾ ತಂಡಗಳು ಅವಶೇಷಗಳ ಮೂಲಕ ಶೋಧ ನಡೆಸುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.