ನವದೆಹಲಿ : ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಇತ್ತೀಚಿನ ಟ್ವಿಟರ್ ಪೋಸ್ಟ್ಗಳಲ್ಲಿ ಆಸಕ್ತಿದಾಯಕ ವೀಡಿಯೊಗಳು, ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ, ಅವರು ಚೀನಾದಲ್ಲಿ ಕೋವಿಡ್ ಐಸೋಲೇಷನ್ ವಾರ್ಡ್ ಎಂದು ಹೇಳಿಕೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಗೋಯೆಂಕಾ ಅವರ ಟ್ವೀಟ್ನಲ್ಲಿ ಚೀನಾದ ಕೋವಿಡ್ ಐಸೋಲೇಷನ್ ಶಿಬಿರದ ವೀಡಿಯೊವನ್ನು ಕಾಣಬಹುದಾಗಿದ್ದು, ಅದು ಜೈಲಿನಂತೆ ಕಾಣುತ್ತದೆ.

“ಇದು ಜೈಲು-ಇಲ್ಲವೇ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇದು ಚೀನಾದ ಕೋವಿಡ್ ಐಸೋಲೇಷನ್ ವಾರ್ಡ್!” ಎಂದು ಅವರ ಟ್ವೀಟ್ನಲ್ಲಿ ಬರೆಯಲಾಗಿದೆ.

ಈ ಟ್ವೀಟ್ ಅನ್ನು ಮೂಲತಃ “ವಾಲ್ ಸ್ಟ್ರೀಟ್ ಸಿಲ್ವರ್” ಹ್ಯಾಂಡಲ್ ಪೋಸ್ಟ್ ಮಾಡಿದ್ದು, ಅದು “ಚೀನಾ ಕೋವಿಡ್ ಪ್ರತ್ಯೇಕತಾ ಶಿಬಿರಗಳೊಳಗಿನ ಜೀವನ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಮಕ್ಕಳಿರುವ ಮಹಿಳೆಯರು, ಗರ್ಭಿಣಿಯರು ಸಹ ಇಲ್ಲಿ ಲಾಕ್ ಆಗಿರುವ ಬಗ್ಗೆ ವರದಿಗಳಿವೆ. ಇದು ನಿಜವಾಗಿಯೂ ಕೋವಿಡ್ ಬಗ್ಗೆಯೇ? ಅಥವಾ ಇದು ಕೇವಲ ನಿಯಂತ್ರಣದ ಬಗ್ಗೆಯೇ? ಅಂತ ಪ್ರಶ್ನೆ ಕೇಳಲಾಗಿದೆ.

 

Share.
Exit mobile version