ನವದೆಹಲಿ: ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪನದ ಬಗ್ಗೆ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿಯವರು ಭಾವುಕರಾದರು.ಪೀಡಿತ ದೇಶಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಪ್ರಧಾನಿ ಈ ಹಿಂದೆ ಭರವಸೆ ನೀಡಿದ್ದರು.
ವಿಡಿಯೋದಲ್ಲಿ ಪ್ರಧಾನಿ ಮೋದಿಯವರು ಭೂಕಂಪದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ದೇಶವು ಭಾರಿ ಹಾನಿಗೆ ಸಾಕ್ಷಿಯಾಗಿದೆ. ಅಕ್ಕಪಕ್ಕದ ದೇಶಗಳಲ್ಲೂ ಪ್ರಾಣಹಾನಿಯಾಗುವ ಸಂಭವವಿದೆ. ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡುವಾಗ ಪ್ರಧಾನಿ ಅವರ ಕಣ್ಣಲ್ಲಿ ನೀರು ತುಂಬಿತ್ತು.
ಸಂಸತ್ತಿನಲ್ಲಿ ಇಂದು ನಡೆದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೀಯ ಪಕ್ಷದ ಸಭೆಯಲ್ಲಿ ಟರ್ಕಿಯಲ್ಲಿನ ದುರಂತದ ಬಗ್ಗೆ ಪಕ್ಷದ ಸದಸ್ಯರಿಗೆ ತಿಳಿಸುವಾಗ ಪ್ರಧಾನಿ ಮೋದಿಯವರು ಭಾವುಕರಾದರು ಎಂದು ಪ್ರಧಾನಿ ಹೇಳಿಕೆಯ ನಂತರ ಬಿಜೆಪಿ ನಾಯಕ ಮನೋಜ್ ತಿವಾರಿ ಹೇಳಿದ್ದಾರೆ.
PM Modi Gets Emotional, Teary-eyed Over Turkey Earthquake.#TNShorts #Turkey #Earthquake #PMModi pic.twitter.com/T2b7CFgTEk
— TIMES NOW (@TimesNow) February 7, 2023
ಟರ್ಕಿ ಭೂಕಂಪದ ಬಗ್ಗೆ ಮಾತನಾಡುವಾಗ ಪ್ರಧಾನಿ ಮೋದಿಯವರು ಕಣ್ಣೀರು ಹಾಕಿದರು. ಏಕೆಂದರೆ 2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಕಚ್‌ನಲ್ಲಿ ಭೂಕಂಪನ ಸಂಭವಿಸಿತ್ತು. ಅದಕ್ಕೆ 13000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.ಈ ಕಾರಣದಿಂದಾಗಿ ಪ್ರಧಾನಿ ಟರ್ಕಿಯ ಜನರೊಂದಿಗೆ ಸಹಾನುಭೂತಿ ಹೊಂದಬಹುದು ಎಂದು ತಿವಾರಿ ಹೇಳಿದ್ದಾರೆ.
ಟರ್ಕಿಗೆ ಭಾರತ ಸಹಾಯಹಸ್ತ
ಸೋಮವಾರದಿಂದ ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಗಳು ಸಂಭವಿಸುತ್ತಲೆ ಇದೆ. ದುರ್ಘಟನೆಯಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಸಾಕಷ್ಟು ಜನರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಎರಡು ದೇಶಗಳಗಳಲ್ಲಿ ಭೂಕಂಪನದಿಂದ ಅಪಾರ ಪ್ರಮಾನದ ಹಾನಿ ಸಂಭವಿಸಿದೆ. ಅವಶೇಷಗಳಡಿಯಲ್ಲಿ ಸಿಲುಕಿದರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ.
ವಿಪತ್ತು ಪೀಡಿತ ದೇಶಕ್ಕೆ ಭಾರತ ಸರ್ಕಾರವು ನೆರವು ನೀಡುತ್ತಿದ್ದು, ಭಾರತದಿಂದ ಪರಿಹಾರ ಸಾಮಗ್ರಿಗಳ ಮೊದಲ ಬ್ಯಾಚ್ ಮಂಗಳವಾರ NDRF ಹುಡುಕಾಟ ಮತ್ತು ಪಾರುಗಾಣಿಕಾ ತಂಡಗಳೊಂದಿಗೆ ಭೂಕಂಪ ಪೀಡಿತ ದೇಶವನ್ನು ತಲುಪಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಇಎಎಂ) ವಕ್ತಾರ ಅರಿಂದಮ್ ಬಾಗ್ಚಿ ಅವರು ಟರ್ಕಿಗೆ ತೆರಳುವ ಬ್ಯಾಚ್‌ನ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಪ್ರಬಲ ಭೂಕಂಪಗಳು ದೇಶವನ್ನು ತತ್ತರಿಸಿರುವ ಕಾರಣ ಟರ್ಕಿಗೆ ಸಹಾಯ ಮಾಡಲು ವಿಶೇಷವಾಗಿ ತರಬೇತಿ ಪಡೆದ ಶ್ವಾನದಳಗಳು, ವೈದ್ಯಕೀಯ ಸರಬರಾಜುಗಳು, ಡ್ರಿಲ್ಲಿಂಗ್ ಯಂತ್ರಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಕಳುಹಿಸಲಾಗಿದೆ.
ವೈದ್ಯಕಿಯ ತಂಡ ಟರ್ಕಿಗೆ ರವಾನೆ
ಈ ಪ್ರದೇಶದಲ್ಲಿ ಪೀಡಿತ ಜನರಿಗೆ ವೈದ್ಯಕೀಯ ನೆರವು ನೀಡಲು ಭಾರತೀಯ ಸೇನೆಯು ವೈದ್ಯಕೀಯ ತಂಡವನ್ನು ದೇಶಕ್ಕೆ ಕಳುಹಿಸಿದೆ. ಆಗ್ರಾ ಮೂಲದ ಆರ್ಮಿ ಫೀಲ್ಡ್ ಆಸ್ಪತ್ರೆಯು ಭೂಕಂಪ ಪೀಡಿತ ದೇಶಕ್ಕೆ 89 ಸದಸ್ಯರ ವೈದ್ಯಕೀಯ ತಂಡವನ್ನು ರವಾನಿಸಿದ್ದು, ಮೂಳೆ ಶಸ್ತ್ರಚಿಕಿತ್ಸಾ ತಂಡ, ಸಾಮಾನ್ಯ ಶಸ್ತ್ರಚಿಕಿತ್ಸಾ ತಜ್ಞ ತಂಡ ಮತ್ತು ವೈದ್ಯಕೀಯ ತಜ್ಞ ತಂಡಗಳು ಸೇರಿದಂತೆ ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ತಂಡಗಳನ್ನು ಒಳಗೊಂಡಿದೆ.
ಈ ಬಾರಿ ಲಿಂಗಾಯತರು ಬಿಜೆಪಿಗೆ ವೋಟ್ ಹಾಕಲ್ಲ: ಮಾಜಿ ಸಿಎಂ ಕುಮಾರಸ್ವಾಮಿ ಭವಿಷ್ಯ
BREAKING NEWS : ಕನ್ನಡ ವರ್ಣಮಾಲೆಗೆ ಚಿತ್ರ ಬಿಡಿಸಿದ ಬಾದಲ್ ನಂಜುಂಡಸ್ವಾಮಿ : ಕೈಚಳಕ್ಕೆ ಪ್ರಧಾನಿ ಮೋದಿ ಶ್ಲಾಘನೆ
BIGG NEWS: ‘ಗೌತಮ್ ಅದಾನಿ’ ಲಾಭಕ್ಕಾಗಿ ನಿಯಮಗಳು ಬಾಗಿವೆ ; ಸಂಸತ್ತಿನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ