ಥಾಣೆ(ಮಹಾರಾಷ್ಟ್ರ): ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ((NCP) ಮುಖ್ಯಸ್ಥ ಶರದ್ ಪವಾರ್(Sharad Pawar) ಅವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಶೇರ್ ಮಾಡಿದ ಆರೋಪದಲ್ಲಿ ಕಳೆದ ತಿಂಗಳು ಬಂಧಿತೆಯಾಗಿದ್ದ ಮರಾಠಿ ನಟಿ ಕೇತಕಿ ಚಿತಾಳೆ(Marathi actor Ketaki Chitale )ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಪಡೆದು ನಿನ್ನೆ ಥಾಣೆ ಜೈಲಿನಿಂದ ಹೊರಬಂದಿದ್ದಾರೆ.
ಜಿಲ್ಲಾ ನ್ಯಾಯಾಧೀಶ ಎಚ್‌ಎಂ ಪಟವರ್ಧನ್ ಅವರು 20,000 ರೂ. ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಿದರು.
ಪವಾರ್ ಅವರನ್ನು ಅವಹೇಳನಕಾರಿಯಾಗಿ ಉಲ್ಲೇಖಿಸುವ ಮರಾಠಿ ಪದ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮೇ 14 ರಂದು ನಟಿ ಕೇತಕಿ ಚಿತಾಳೆ ಅವರನ್ನು ಬಂಧಿಸಲಾಗಿತ್ತು.
WATCH – Actress #KetakiChitale released from Thane Central Jail.
Ketaki was arrested for allegedly sharing an objectionable post about NCP chief #SharadPawar on social media. pic.twitter.com/diyrs20gwm— TIMES NOW (@TimesNow) June 23, 2022
ಜೈಲಿನಿಂದ ಹೊರಬಂದ ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಚಿತಾಳೆ, ಸರಿಯಾದ ಸಮಯದಲ್ಲಿ ಮಾತನಾಡುವುದಾಗಿ ಹೇಳಿದರು. ಹೆಚ್ಚಿನ ಪ್ರಶ್ನೆಗಳಿಗೆ “ಜೈ ಹಿಂದ್, ಜೈ ಮಹಾರಾಷ್ಟ್ರ” ಎಂದು ಉತ್ತರಿಸಿದ್ದಾರೆ.
BIGG NEWS : ಈ ವರ್ಷದಿಂದಲೇ ಕೆಂಪೇಗೌಡರ ಹೆಸರಿನಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ : ಸಚಿವ ಅಶ್ವತ್ಥ ನಾರಾಯಣ ಘೋಷಣೆ
2011ರ ಜನಗಣತಿ ಆಧರಿಸಿ ಬಿಬಿಎಂಪಿ ವಾರ್ಡ್ ಗಳ ಮರುವಿಂಗಡಣೆ – ಮುಖ್ಯ ಆಯುಕ್ತ ತುಷಾರ್ ಗಿರಿನಾಥ್