ಕೆಎನ್ ಎನ್ ನ್ಯೂಸ್ ಡೆಸ್ಕ್: ಗುರುವಾರ ರಾತ್ರಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿ ಫೈನಲ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಿತು. ಈ ವೇಳೆ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ಆಸ್ಟ್ರೇಲಿಯಾ ವಿರುದ್ಧ ಐದು ರನ್‌ಗಳ ಸೋಲನ್ನು ಎದುರಿಸುವ ಮೂಲಕ ಹಿನ್ನಡೆ ಅನುಭವಿಸಿತು.
ಬೆಥ್ ಮೂನಿ ಮತ್ತು ಮೆಗ್ ಲ್ಯಾನಿಂಗ್ ಕ್ರಮವಾಗಿ 54 ಮತ್ತು 49 ರನ್‌ಗಳನ್ನು ಸಿಡಿಸಿದ ನಂತರ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 172/4 ಬೃಹತ್ ಮೊತ್ತವನ್ನು ದಾಖಲಿಸಿತು. ನಂತರ, ಟೀಂ ಇಂಡಿಯಾ ನಾಲ್ಕು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ತಮ್ಮ ತಂಡಕ್ಕೆ ಭರವಸೆಯ ಕಿರಣವನ್ನು ತಂದರು. ಆದಾಗ್ಯೂ, ಭಾರತವು ಐದು ರನ್‌ಗಳಿಂದ ಸೋತಿತು ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡ ಫೈನಲ್‌ಗೆ ಪ್ರವೇಶಿಸಿತು.
ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ವಿಲಕ್ಷಣ ರನ್ ಔಟ್ ಆಗಿದ್ದು, ಇದ್ರಿಂದ ನಿರಾಸೆಗೊಂಡ ಹರ್ಮನ್‌ಪ್ರೀತ್ ಸಿಟ್ಟಿನಿಂದ ಬ್ಯಾಟ್ ಅನ್ನು ಬಿಸಾಡಿದ್ದಾರೆ. ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
— Anna 24GhanteChaukanna (@Anna24GhanteCh2) February 23, 2023
SHOCKING NEWS: ಆಟದಲ್ಲಿ ಸೋತಿದ್ಕೆ ನಕ್ಕ 7 ಮಂದಿಗೆ ಗುಂಡಿಕ್ಕಿ ಕೊಲೆಗೈದ ದುಷ್ಕರ್ಮಿಗಳು… ಇಲ್ಲಿದೆ ಭಯಾನಕ ವಿಡಿಯೋ
BREAKING NEWS: ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್ ಪಾಟೀಲ್ ಪತಿ ಇನ್ನಿಲ್ಲ
SHOCKING NEWS: ಆಟದಲ್ಲಿ ಸೋತಿದ್ಕೆ ನಕ್ಕ 7 ಮಂದಿಗೆ ಗುಂಡಿಕ್ಕಿ ಕೊಲೆಗೈದ ದುಷ್ಕರ್ಮಿಗಳು… ಇಲ್ಲಿದೆ ಭಯಾನಕ ವಿಡಿಯೋ
BREAKING NEWS: ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾದೇವಿ ಸಿಂಗ್ ಪಾಟೀಲ್ ಪತಿ ಇನ್ನಿಲ್ಲ