ನವದೆಹಲಿ : ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ನೂತನ ಸಂಸತ್ ಭವನದ ವೀಡಿಯೊವನ್ನ ಸಧ್ಯ ಬಿಡುಗಡೆ ಮಾಡಲಾಗಿದೆ. ಹೊಸ ತ್ರಿಕೋನಾಕಾರದ ಈ ಸಂಕೀರ್ಣವು ಬಹುತೇಕ ಅಸ್ತಿತ್ವದಲ್ಲಿರುವ ಸಂಕೀರ್ಣಕ್ಕೆ ಹೋಲುತ್ತಿದೆ.
ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಸಭಾ ಉಪಸಭಾಪತಿ ಹರಿವಂಶ್ ಮತ್ತಿತರರು ಭಾಗವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭವು ಭಾನುವಾರ ಬೆಳಿಗ್ಗೆ ಹವನ ಮತ್ತು ಬಹುಧರ್ಮೀಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಲಿದೆ. ನಂತ್ರ ಪ್ರಧಾನಿ ಮೋದಿ ಅವ್ರು ಲೋಕಸಭಾ ಕೊಠಡಿಯನ್ನ ಔಪಚಾರಿಕವಾಗಿ ಉದ್ಘಾಟಿಸಲಿದ್ದು, ಸಂಸತ್ ಭವನದ ಮುಂದೆ ಹವನ ನಡೆಯಲಿದೆ.
ಲೋಕಸಭೆ ಚೇಂಬರ್ 888 ಸ್ಥಾನಗಳನ್ನ ಹೊಂದಿದ್ದರೆ, ರಾಜ್ಯಸಭಾ ಚೇಂಬರ್ 384 ಸ್ಥಾನಗಳನ್ನ ಹೊಂದಿರುತ್ತದೆ. ಇದು ಪ್ರಸ್ತುತ ಸಂಸತ್ತಿನ ಕಟ್ಟಡದಂತಲ್ಲದೆ ಕೇಂದ್ರ ಸಭಾಂಗಣವನ್ನ ಹೊಂದಿರುವುದಿಲ್ಲ. ಜಂಟಿ ಅಧಿವೇಶನದ ಸಂದರ್ಭದಲ್ಲಿ, ಲೋಕಸಭಾ ಚೇಂಬರ್ 1,272 ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ಉಳಿದ ನಾಲ್ಕು ಮಹಡಿಗಳಲ್ಲಿ ಸಚಿವರ ಕಚೇರಿಗಳು ಮತ್ತು ಸಮಿತಿ ಕೊಠಡಿಗಳು ಇರಲಿವೆ.
#WATCH | Delhi: First look at the New Parliament building that will be inaugurated by Prime Minister Narendra Modi on May 28.#NewParliamentBuilding pic.twitter.com/ouZoz6dLgu
— ANI (@ANI) May 26, 2023
ಎಚ್ಚರ ; ಮಾನಸಿಕ ಆರೋಗ್ಯದ ಮೇಲೆ ‘ಬಿಸಿ ಗಾಳಿ’ ಪರಿಣಾಮ, ಹೆಚ್ಚುತ್ತಿವೆ ‘ಆತ್ಮಹತ್ಯೆ’ ಪ್ರಕರಣಗಳು
SHOCKING : ಶಿಕ್ಷಕಿ ‘ಮೊಬೈಲ್’ ಕಸಿದುಕೊಂಡ ಕೋಪಕ್ಕೆ ‘ಶಾಲೆ’ಗೆ ಬೆಂಕಿ ಹಚ್ಚಿದ ಬಾಲಕಿ, 20 ಮಂದಿ ಸಜೀವ ದಹನ