ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai )  ಅವರು ‘ಯುಪಿ ಮಾಡೆಲ್’ ಜಪಿಸುತ್ತಿದ್ದರ ಪರಿಣಾಮ ಕರ್ನಾಟಕವೂ ಉತ್ತರ ಪ್ರದೇಶದಂತಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಏರಿಕೆಯಾಗಿವೆ, ಅದರಲ್ಲೂ ಬೆಂಗಳೂರಿನದ್ದು ಸಿಂಹಪಾಲು. ಗಾರ್ಡನ್ ಸಿಟಿಯನ್ನು ( Garden City Bengaluru ) ಕ್ರೈಮ್ ಸಿಟಿಯನ್ನಾಗಿಸಿದ್ದು ಬೊಮ್ಮಾಯಿಯವರ ಒಂದು ವರ್ಷದ ಸಾಧನೆಯೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.

ಬೊಮ್ಮಾಯಿ ಅವರ ಆಡಳಿತದ ಒಂದು ವರ್ಷದಲ್ಲಿ ಕರ್ನಾಟಕವನ್ನು ನಂ1 ರಾಜ್ಯವಾಗಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ! ಅದು ‘ನಕಾರಾತ್ಮಕ ವಿಷಯಗಳಲ್ಲಿ’ ಎಂಬುದು ವಿಷಾದನೀಯ. ಆಡಳಿತದ ವಿರುದ್ಧದ ಪೋಸ್ಟ್‌ಗಳನ್ನೇ ‘ಸೈಬರ್ ಕ್ರೈಮ್’ ಎಂದು ಪರಿಗಣಿಸುವ ಸರ್ಕಾರ ಅಸಲಿ ಸೈಬರ್ ಕ್ರೈಮ್‌ನ್ನ ಮರೆತಿರುವುದರ ಪರಿಣಾಮ ಬೆಂಗಳೂರು ನಂ1 ಸ್ಥಾನಕ್ಕೇರಿದೆ ಎಂದು ಕಿಡಿಕಾರಿದೆ.

ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ, ಇದು ಬೊಮ್ಮಾಯಿ ಮಾಡೆಲ್ ಸಾಧನೆ! ಅತಿವೃಷ್ಟಿ, ಕೋವಿಡ್‌ನಂತಹ ಕ್ಲಿಷ್ಟ ಸಂದರ್ಭದಲ್ಲಿ ರೈತರನ್ನು ಕಡೆಗಣಿಸಿದ ಪರಿಣಾಮವಿದು. ಬೆಲೆ ಏರಿಕೆಯ ಹೊರೆ ಹೊರಿಸಿದ ಡಬಲ್ ಇಂಜಿನ್ ಸರ್ಕಾರಗಳೇ ಈ ಸಾವುಗಳಿಗೆ ಹೊಣೆ. ರೈತರಿಗೆ ಕಾಂಗ್ರೆಸ್ ಕೃಷಿ ಭಾಗ್ಯ ಕೊಟ್ಟರೆ, ಬಿಜೆಪಿ ಸಾವಿನ ಭಾಗ್ಯ ಕೊಟ್ಟಿದೆ ಎಂಬುದಾಗಿ ವಾಗ್ಧಾಳಿ ನಡೆಸಿದೆ.

Share.
Exit mobile version