ನವದೆಹಲಿ: ಬಹುತೇಕರು ತಮ್ಮ ಭವಿಷ್ಯದ ದಿನಗಳಲ್ಲಿ ತಾವು ಕೂಡಿಟ್ಟಂತ ಹಣಕ್ಕೆ ಹೆಚ್ಚಿನ ವಾಪಾಸಾತಿಯನ್ನು ನಿರೀಕ್ಷಿಸುತ್ತಾರೆ. ಇದಕ್ಕಾಗಿ ದೀರ್ಘಕಾಲಿಕ ನಿಶ್ಚಿತ ಠೇವಣಿಗಳ ಮೊರೆ ಹೋದ್ರೆ.. ಮತ್ತೆ ಕೆಲವರು ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಕೂಡ ಮಾಡ್ತಾರೆ. ಇದರ ನಡುವೆಯೂ ಹೆಚ್ಚು ಬಡ್ಡಿ ದರವನ್ನು ನಿಶ್ಚಿತ ಠೇವಣೆಯಲ್ಲಿ ( Fixed Deposit ), ಸರ್ಕಾರಿ ಭದ್ರತೆಯ ಮೂಲಕ ನೀಡೋದು ಅಂಚೆ ಕಚೇರಿಯಾಗಿವೆ. ಅಂಚೆ ಕಚೇರಿ ( Post Office ) ಎಫ್ ಡಿ ಬಡ್ಡಿದರವನ್ನು ( FD interest rates ) ಶೇಕಡಾ 5.5 ರಿಂದ ಶೇಕಡಾ 6.7ಕ್ಕೆ ನೀಡುತ್ತಿದೆ. ಹಾಗಾದ್ರೇ.. ನೀವು ಎಫ್ ಡಿ ಮೂಲಕ ಹೆಚ್ಚಿನ ಹಣ ಗಳಿಕೆ ನಿರೀಕ್ಷೆಯಲ್ಲಿದ್ದರೇ, ಪೋಸ್ಟ್ ಆಫೀಸ್ ಸ್ಕೀಮ್ ಎಷ್ಟು ಪ್ರಮುಖವಾಗಲಿದೆ ಎನ್ನುವ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ.
BIG BREAKING NEWS: ‘ಪರಿಷತ್ ಚುನಾವಣೆ’ಯಲ್ಲಿ ‘ಬಿಜೆಪಿ ಜತೆ ಜೆಡಿಎಸ್ ಮೈತ್ರಿ’ಯಿಲ್ಲ – ಮಾಜಿ ಸಿಎಂ ಕುಮಾರಸ್ವಾಮಿ
ಅಂಚೆ ಕಚೇರಿಯಲ್ಲಿ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಅನೇಕ ಸೌಲಭ್ಯಗಳನ್ನು ಪಡೆಯಬಹುದು. ಅತ್ಯಂತ ಪ್ರಮುಖ ವಿಷಯವೆಂದರೆ ಇದರಲ್ಲಿ ನೀವು ಆದಾಯದ ಜೊತೆಗೆ ಸರ್ಕಾರದ ಖಾತರಿಯನ್ನು ಪಡೆಯುತ್ತೀರಿ. ಇಲ್ಲಿ, ನೀವು ತ್ರೈಮಾಸಿಕ ಆಧಾರದ ಮೇಲೆ ಬಡ್ಡಿಯ ಸೌಲಭ್ಯವನ್ನು ಪಡೆಯುತ್ತೀರಿ.
ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್ ಸ್ಥಾಪನೆಗೆ ಕ್ರಮ – ಸಿಎಂ ಬಸವರಾಜ ಬೊಮ್ಮಾಯಿ
ಅಂಚೆ ಕಚೇರಿಯಲ್ಲಿ ಎಫ್ ಡಿಯಲ್ಲಿ ಹೂಡಿಕೆ ಮಾಡುವುದು ತುಂಬಾ ಸುಲಭ. ಇಂಡಿಯಾ ಪೋಸ್ಟ್ ತನ್ನ ವೆಬ್ ಸೈಟ್ ನಲ್ಲಿ ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದೆ. ಈ ಮಾಹಿತಿಯ ಪ್ರಕಾರ, ನೀವು 1, 2, 3, ಅಥವಾ 5 ವರ್ಷಗಳು ಸೇರಿದಂತೆ ವಿವಿಧ ಅವಧಿಗಳಿಗೆ ಅಂಚೆ ಕಚೇರಿಯಲ್ಲಿ ಎಫ್ ಡಿ ಪಡೆಯಬಹುದು.
ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್ ಸ್ಥಾಪನೆಗೆ ಕ್ರಮ – ಸಿಎಂ ಬಸವರಾಜ ಬೊಮ್ಮಾಯಿ
ನಿಶ್ಚಿತ ಠೇವಣಿ ಖಾತೆಯ ಪ್ರಯೋಜನಗಳು
- ಭಾರತ ಸರ್ಕಾರವು ಅಂಚೆ ಕಚೇರಿಯಲ್ಲಿ ನಿಶ್ಚಿತ ಠೇವಣಿಗಳ ಬಗ್ಗೆ ನಿಮಗೆ ಖಾತರಿ ನೀಡುತ್ತದೆ.
- ಹೂಡಿಕೆದಾರರ ಹಣ ವು ಸಂಪೂರ್ಣವಾಗಿ ಸುರಕ್ಷಿತವಾಗಿದೆ.
- ಇದರಲ್ಲಿ ಎಫ್ ಡಿಯನ್ನು ಆಫ್ ಲೈನ್ (ನಗದು, ಚೆಕ್) ಅಥವಾ ಆನ್ ಲೈನ್ (ನೆಟ್ ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್) ವಿಧಾನಗಳ ಮೂಲಕ ಮಾಡಬಹುದು.
- ನೀವು ಒಂದಕ್ಕಿಂತ ಹೆಚ್ಚು ಎಫ್ ಡಿಗಳಲ್ಲಿ ಹೂಡಿಕೆ ಮಾಡಬಹುದು.
- ಎಫ್ ಡಿ ಖಾತೆಯು ಜಂಟಿಯಾಗಿರಬಹುದು.
- 5 ವರ್ಷಗಳ ಕಾಲ ನಿಶ್ಚಿತ ಠೇವಣಿ ಇಡುವ ಮೂಲಕ ಐಟಿಆರ್ ಸಲ್ಲಿಸುವ ಸಮಯದಲ್ಲಿ ನಿಮಗೆ ತೆರಿಗೆ ವಿನಾಯಿತಿ ಸಿಗುತ್ತದೆ.
- ಒಬ್ಬರು ಸುಲಭವಾಗಿ ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ಎಫ್ ಡಿಯನ್ನು ವರ್ಗಾಯಿಸಬಹುದು.
ಅಂಚೆ ಕಚೇರಿಯಲ್ಲಿ ಎಫ್ ಡಿಯಲ್ಲಿ ಹೂಡಿಕೆ ಮಾಡಲು, ನೀವು ಚೆಕ್ ಅಥವಾ ನಗದು ಪಾವತಿಸುವ ಮೂಲಕ ಖಾತೆಯನ್ನು ತೆರೆಯಬಹುದು. ಇದರಲ್ಲಿ, ಕನಿಷ್ಠ 1,೦೦೦ ರೂ.ಗಳೊಂದಿಗೆ ಖಾತೆಗಳನ್ನು ತೆರೆಯಬಹುದು ಮತ್ತು ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ.
Covid19 Karnataka Case: ರಾಜ್ಯದಲ್ಲಿ ಕಳೆದ 2 ವಾರಗಳಿಂದ ಹೆಚ್ಚಾದ ಕೊರೋನಾ: 3ನೇ ಅಲೆ ಆರಂಭ.?
ಗಮನಾರ್ಹ ಅಂಶವೆಂದ್ರೇ, ಎಫ್ ಡಿ ಹೆಚ್ಚಿನ ಬಡ್ಡಿಯನ್ನು ನಿಮ್ಮ ಹಣಕ್ಕೆ ತಂದುಕೊಡುತ್ತದೆ. ಇದರಅಡಿಯಲ್ಲಿ, 7 ದಿನಗಳಿಂದ ಒಂದು ವರ್ಷದ ಎಫ್ ಡಿಯಲ್ಲಿ ಶೇಕಡಾ 5.50 ಬಡ್ಡಿ ಲಭ್ಯವಿದೆ. ಇದೇ ಬಡ್ಡಿದರವು 1 ವರ್ಷದ 1 ದಿನದಿಂದ 2 ವರ್ಷಗಳ ಎಫ್ ಡಿಗಳಲ್ಲಿಯೂ ಲಭ್ಯವಿದೆ. ಅದೇ ಸಮಯದಲ್ಲಿ, ಶೇಕಡಾ 5.50ರ ದರದಲ್ಲಿ 3 ವರ್ಷಗಳವರೆಗೆ ಎಫ್ ಡಿ ಯಲ್ಲಿ ಬಡ್ಡಿಯೂ ಲಭ್ಯವಿದೆ. 3 ವರ್ಷ ಮತ್ತು ಒಂದು ದಿನದಿಂದ 5 ವರ್ಷದವರೆಗಿನ ಎಫ್ ಡಿಗಳ ಮೇಲೆ ಶೇಕಡಾ 6.70 ರಷ್ಟು ಬಡ್ಡಿ ಲಭ್ಯವಿದೆ.