ಸುಭಾಷಿತ :

Wednesday, January 22 , 2020 12:12 PM

ಇನ್ನು ಮುಂದೆ ಈ ಫೋನ್ ಗಳಲ್ಲಿ ವಾಟ್ಸಾಪ್ ಇರಲ್ವಂತೆ…


Monday, September 23rd, 2019 1:32 pm

ನವದೆಹಲಿ : ದೇಶದಲ್ಲಿ ಹೆಚ್ಚು ಜನರು ಬಳಕೆ ಮಾಡುವಂತಹ ಒಂದು ಸಾಮಾಜಿಕ ಜಾಲತಾಣ ಎಂದರೆ ಅದು ವಾಟ್ಸಾಪ್ . ಆದರೆ ಇನ್ನು ಮುಂದೆ ಕೆಲವೊಂದು ಮೊಬೈಲ್ ಗಳಲ್ಲಿ ವಾಟ್ಸಾಪ್ ಲಭ್ಯವಿರಲ್ಲ.

ಹೌದು… ವಾಟ್ಸಪ್‌ನ ಕೆಲವೊಂದು ಫೀಚರ್‌ಗಳು ಕೆಲಸ ಮಾಡಲು ಸೂಕ್ತ ಆಪರೇಟಿಂಗ್ ಸಾಫ್ಟ್‌ವೇರ್ ಬೆಂಬಲ ಮತ್ತು ಹಾರ್ಡ್‌ವೇರ್ ಬೆಂಬಲ ಕೂಡ ಬೇಕಾಗುತ್ತದೆ. ಹೀಗಾಗಿ ಹಳೆಯ ಓಎಸ್‌ ಹೊಂದಿರುವ ಮತ್ತು ಆಂಡ್ರಾಯ್ಡ್, ಐಫೋನ್ ಮತ್ತು ವಿಂಡೋಸ್ ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡುವುದನ್ನು ನಿಲ್ಲಿಸಲಿದೆ.

ವಾಟ್ಸಪ್ ಫೀಚರ್ ಕುರಿತು ಸೂಚಿಸುವ ವಾಬೀಟಾಇನ್ಫೋ, ಐಓಎಸ್ 8 ಮತ್ತು ಅದಕ್ಕಿಂತ ಕೆಳಗಿನ ಐಓಎಸ್ ಬಳಸುವ ಐಫೋನ್‌ಗಳಲ್ಲಿ ಫೆ. 1, 2020ರಿಂದ ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಜತೆಗೆ ಆಂಡ್ರಾಯ್ಡ್ 2.3.7 ಅಥವಾ ಅದಕ್ಕಿಂತ ಕೆಳಗಿನ ಓಎಸ್ ಬಳಸುವ ಆಂಡ್ರಾಯ್ಡ್ ಫೋನ್‌ಗಳಲ್ಲೂ ವಾಟ್ಸಪ್ ಬೆಂಬಲ ಕೊನೆಯಾಗಲಿದೆ. ಅಲ್ಲದೆ ಎಲ್ಲ ಮಾದರಿಯ ವಿಂಡೋಸ್ ಫೋನ್‌ಗಳಲ್ಲಿ ಡಿ. 31, 2019ರಿಂದ ವಾಟ್ಸಪ್‌ ಸ್ಥಗಿತಗೊಳ್ಳಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions