ಡಿ.26ರವರೆಗೆ ಇಂಟರ್ ಶಿಪ್ ಪ್ರವೇಶಕ್ಕೆ ಅವಧಿ ವಿಸ್ತರಿಸಿದ ವಿಟಿಯು

ಬೆಂಗಳೂರು: ವಿವಿಧ ಕಂಪನಿಗಳಲ್ಲಿ ಇಂಟರ್ ಶಿಪ್‌ಗಾಗಿ ಪ್ರವೇಶ ಪಡೆದುಕೊಳ್ಳಲು ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಡಿಸೆಂಬರ್‌ 26 ರವರೆಗೆ ವಿಸ್ತರಿಸಿದೆ. ವಿಟಿಯು ಹಾಗೂ ಸ್ವಾಯತ್ತ, ಸಂಯೋಜಿತ ಕಾಲೇಜುಗಳಲ್ಲಿ 7 ಮತ್ತು 8ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಇಂಟರ್‌ ಶಿಪ್‌ಗೆ ಪ್ರವೇಶ ಪಡೆದುಕೊಳ್ಳಲು ಈ ಹಿಂದೆ ಡಿಸೆಂಬರ್‌ 15 ಕೊನೆಯ ದಿನವೆಂದು ನಿಗದಿ ಪಡಿಸಿತ್ತು. ವಿದ್ಯಾರ್ಥಿಗಳ ಮನವಿಯ ಮೇರೆಗೆ ವಿಟಿಯು ಇದೀಗ ಡಿಸೆಂಬರ್‌ 26ರವರೆಗೆ ವಿಸ್ತರಣೆ ಮಾಡಿರುವುದಾಗಿ ವಿಟಿಯು ಪ್ರಕಟಣೆ ತಿಳಿಸಿದೆ. … Continue reading ಡಿ.26ರವರೆಗೆ ಇಂಟರ್ ಶಿಪ್ ಪ್ರವೇಶಕ್ಕೆ ಅವಧಿ ವಿಸ್ತರಿಸಿದ ವಿಟಿಯು