ನವದೆಹಲಿ: ಲೋಕಸಭಾ ಚುನಾವಣೆ 2024 ರ ಮೊದಲ ಹಂತದ ಮತದಾನ ಇಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸಂಸದೀಯ ಸ್ಥಾನಗಳಿಗೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಜನರನ್ನು ಒತ್ತಾಯಿಸಿದರು.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, “ಇಂದು ಮೊದಲ ಹಂತದ ಮತದಾನ! ನೆನಪಿಡಿ, ನಿಮ್ಮ ಪ್ರತಿಯೊಂದು ಮತವು ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯವನ್ನು ಮತ್ತು ಮುಂಬರುವ ಪೀಳಿಗೆಯನ್ನು ನಿರ್ಧರಿಸುತ್ತದೆ. ಆದ್ದರಿಂದ ಕಳೆದ 10 ವರ್ಷಗಳಲ್ಲಿ ರಾಷ್ಟ್ರದ ಆತ್ಮಕ್ಕೆ ಉಂಟಾದ ಗಾಯಗಳಿಗೆ ನಿಮ್ಮ ಮತದ ಶಕ್ತಿಯನ್ನು ಅನ್ವಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿ. ದ್ವೇಷವನ್ನು ಸೋಲಿಸಿ ಮತ್ತು ಪ್ರತಿಯೊಂದು ಮೂಲೆಯಲ್ಲೂ ‘ಮೊಹಬ್ಬತ್ ಕಿ ದುಕಾನ್’ ತೆರೆಯಿರಿ ಅಂತ ಹೇಳಿದ್ದಾರೆ.

ಮೊದಲ ಹಂತದ ಚುನಾವಣೆಯಲ್ಲಿ ವಿವಿಧ ಪಕ್ಷಗಳ 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಿತಿನ್ ಗಡ್ಕರಿ, ಕೆ ಅಣ್ಣಾಮಲೈ, ಜಿತಿನ್ ಪ್ರಸಾದ್, ಜಿತನ್ ರಾಮ್ ಮಾಂಝಿ, ನಕುಲ್ ನಾಥ್, ಗೌರವ್ ಗೊಗೊಯ್, ಇಮ್ರಾನ್ ಮಸೂದ್, ಕಾರ್ತಿ ಚಿದಂಬರಂ, ತಮಿಳಿಸೈ ಸೌಂದರರಾಜನ್ ಮತ್ತು ದಯಾನಿಧಿ ಮಾರನ್ ಅವರ ಭವಿಷ್ಯ ಶುಕ್ರವಾರ ನಿರ್ಧಾರವಾಗಲಿದೆ.

Share.
Exit mobile version