ಸುಭಾಷಿತ :

Monday, February 17 , 2020 5:10 AM

ತ್ವಚೆಯ ಅಂದ ಹೆಚ್ಚಿಸಿ ನಿಮ್ಮನ್ನು ಸುಂದರಿಯನ್ನಾಗಿ ಮಾಡುತ್ತೆ ‘ವಿಟಮಿನ್ ಈ ಕ್ಯಾಪ್ಸುಲ್’


Friday, January 10th, 2020 10:57 am

ಸ್ಪೆಷಲ್ ಡೆಸ್ಕ್ : ಅಂದವನ್ನು ಹೆಚ್ಚಿಸಲು , ತ್ವಚೆಯ ಎಲ್ಲಾ ಸಮಸ್ಯೆ ನಿವಾರಣೆ ಮಾಡಲು ಈ ಆಲ್ ಇನ್ ಒನ್ ಕ್ಯಾಪ್ಸುಲ್ ಅಂದರೆ ವಿಟಾಮಿನ್ ಈ ಕ್ಯಾಪ್ಸುಲ್ ತುಂಬಾನೇ ಉತ್ತಮ. ಈ ಕ್ಯಾಪ್ಸುಲ್ ನಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ…

ಸುಂದರ ತ್ವಚೆಗೆ ವಿಟಾಮಿನ್‌ ಈ ಬಳಕೆ ಮಾಡುವುದು ಉತ್ತಮ. ಇದರಿಂದ ಸ್ಕಿನ್‌ ಗ್ಲೋ ಆಗುತ್ತದೆ.
ವಿಟಾಮಿನ್‌ ಈ ಕ್ಯಾಪ್ಸುಲ್‌ನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಈ ಕ್ಯಾಪ್ಸುಲ್‌ನ್ನು ಡ್ರೈನೆಸ್ ರಿಂಕಲ್ಸ್‌‌ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ಬಳಕೆ ಮಾಡಬಹುದು.

ವಿಟಾಮಿನ್‌ ಈ ಆಯಿಲ್‌ನ್ನು ಉಗುರಿಗೆ ಹಚ್ಚೋದರಿಂದ ಉಗುರು ಹೊಳೆಯುತ್ತದೆ.

ವಿಟಾಮಿನ್‌ ಈ ಕ್ಯಾಪ್ಸುಲ್‌ನ್ನು ಕತ್ತರಿಸಿ ಮುಖಕ್ಕೆ ಹಚ್ಚಿದರೆ ಕಲೆಗಳು ನಿವಾರಣೆಯಾಗಿ ಮುಖ ಹೊಳೆಯುತ್ತದೆ. ಈ ಕ್ಯಾಪ್ಸುಲ್‌ ತ್ವಚೆಯ ಮೇಲೆ ಸಿರಮ್‌ನಂತೆ ಕೆಲಸ ಮಾಡುತ್ತದೆ.

ಮುಖದ ಮೇಲಿನ ಸುಕ್ಕು ಮೊದಲಾದ ಸಮಸ್ಯೆಗಳನ್ನು ನಿವಾರಣೆ ಮಾಡಲು ಇದು ಸಹಾಯ ಮಾಡುತ್ತದೆ.

ಕೂದಲು ಉದ್ದ, ದಪ್ಪ ಮತ್ತು ಸದೃಢವಾಗಲು ಸಹ ಇದು ಸಹಾಯ ಮಾಡುತ್ತದೆ. ಆದುದರಿಂದ ಇದನ್ನು ಮಲಗುವ ಮುನ್ನ ನಿಮ್ಮ ತಲೆಗೆ ಹಚ್ಚಿ ಮಸಾಜ್‌ ಮಾಡಿ, ಮರುದಿನ ಸ್ನಾನ ಮಾಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions