ಸೋಂಕಿನಿಂದ ಮುಕ್ತವಾಗ್ತಿದೆ ವೈರಸ್‌ ರಾಷ್ಟ್ರ: 11 ಮಿಲಿಯನ್ ಜನರನ್ನ ಪರೀಕ್ಷಿಸಿದ್ರು ಒಬ್ಬರಲ್ಲಿಯೂ ಪತ್ತೆಯಾಗಿಲ್ಲ ʼಸೋಂಕುʼ..! – Kannada News Now


India World

ಸೋಂಕಿನಿಂದ ಮುಕ್ತವಾಗ್ತಿದೆ ವೈರಸ್‌ ರಾಷ್ಟ್ರ: 11 ಮಿಲಿಯನ್ ಜನರನ್ನ ಪರೀಕ್ಷಿಸಿದ್ರು ಒಬ್ಬರಲ್ಲಿಯೂ ಪತ್ತೆಯಾಗಿಲ್ಲ ʼಸೋಂಕುʼ..!

ಡಿಜಿಟಲ್‌ ಡೆಸ್ಕ್:‌ ಜಗತ್ತಿನ ತುಂಬೆಲ್ಲಾ ಕೊರೊನಾ ಸೋಂಕು ಹರಡಿಸಿದ ಚೀನಾ ರಾಷ್ಟ್ರದಲ್ಲಿ ವೈರಸ್‌ ಮುಕ್ತವಾಗ್ತಿರೋ ಲಕ್ಷಣಗಳು ಕಾಣಿಸ್ತಿವೆ. ಯಾಕಂದ್ರೆ, ಪೂರ್ವ ಚೀನಾದ ಕರಾವಳಿ ನಗರವಾದ ಕ್ವಿಂಗ್ಡಾವೋನಲ್ಲಿ 11 ಮಿಲಿಯನ್ ನಿವಾಸಿಗಳು ಕೊರೊನಾ ಪರೀಕ್ಷೆ ತೆಗೆದುಕೊಂಡಿದ್ದಾರೆ. ಅಚ್ಚರಿ ಅಂದ್ರೆ, ಯಾರೊಬ್ಬರಲ್ಲಿಯೂ ಸೋಂಕು ಕಾಣಿಸಿಕೊಂಡಿಲ್ಲ. ಅಂದ್ರೆ, ಇದುವರೆಗೆ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ.

ಹೌದು, ಶುಕ್ರವಾರ ಬಂದಿರುವ ರಿಪೋರ್ಟ್‌ನಂತೆ 10.9 ಮಿಲಿಯನ್ ಮಾದರಿಗಳು ಋಣಾತ್ಮಕವಾಗಿವೆ. ಕ್ವಿಂಗ್ಡಾವೋನ ಉಪ ಮೇಯರ್ ಕ್ಸುಯೆ ಕ್ವಿಂಗ್ಗುವೊ ಅವರು ರಾಜ್ಯ ಪ್ರಸಾರಕ ಸಿಸಿ ಟಿವಿಗೆ ಈ ವಿಷ್ಯವನ್ನ ತಿಳಿಸಿದ್ದು, “ಸಮುದಾಯ ಪ್ರಸರಣದ ಅಪಾಯವನ್ನ ಮೂಲಭೂತವಾಗಿ ತೆಗೆದುಹಾಕಲಾಗಿದೆ” ಎಂದು ಹೇಳಿದ್ದಾರೆ. ಇನ್ನು ಎರಡು ತಿಂಗಳ ಅವಧಿಯಲ್ಲಿ 13 ಜನರಿಗೆ ಸೋಂಕು ತಗುಲಿದ್ದರಿಂದ ನಗರದಾದ್ಯಂತ ಪರೀಕ್ಷೆಗೆ ಆದೇಶಿಸಲಾಗಿತ್ತು. ಸಧ್ಯ ಬಂದಿರುವ ವರದಿಯನ್ವಯ 10.9 ಮಿಲಿಯನ್ ಜನರಲ್ಲಿ ಯಾರೊಬ್ಬರಿಲ್ಲಿಯೂ ಸೋಂಕು ಕಾಣಿಸಿಕೊಂಡಿಲ್ಲ.

ಸೆಪ್ಟೆಂಬರ್ ನಲ್ಲಿ ವೈರಸ್ ಪಾಸಿಟಿವ್ ಪರೀಕ್ಷೆಗೊಳಪಡಿಸಿದ ಇಬ್ಬರು ಡಾಕ್ ಕೆಲಸಗಾರರಲ್ಲಿ ಸೋಂಕು ಪತ್ತೆಯಾಗಿತ್ತು. ಆದ್ರೆ, ಇವರಲ್ಲಿ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳು ಕಂಡು ಬಂದಿರಲಿಲ್ಲ. ಕ್ವಿಂಗ್ಡಾವೋದ ಆಸ್ಪತ್ರೆಗೆ ಭೇಟಿ ನೀಡಿ, ಕ್ಯಾಟ್ ಸ್ಕ್ಯಾನ್ ಕೊಠಡಿಗೆ ಕಳುಹಿಸಲಾಯಿತು ನಂತರ ಅದನ್ನ ಸರಿಯಾಗಿ ಸೋಂಕು ತಗುಲದಂತೆ ವ್ಯವಸ್ಥೆ ಮಾಡದ ಕಾರಣ ಇತರ ರೋಗಿಗಗಳಿಗೆ ಸೋಂಕು ಹರಡಲು ಕಾರಣವಾಯ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಧ್ಯ ಕ್ವಿಂಗ್ಡಾವೋದ ಥೋರಾಸಿಕ್ ಆಸ್ಪತ್ರೆಯ ಅಧ್ಯಕ್ಷರಾದ ಆರೋಗ್ಯ ಆಯೋಗದ ನಿರ್ದೇಶಕ ಸೂಯಿ ಝೆನ್ಹುವಾ ಮತ್ತು ಡೆಂಗ್ ಕೈ ಅವರನ್ನ ತನಿಖೆಗೆ ಒಳಪಡಿಸಲಾಗಿದೆ. ಅದ್ರಂತೆ, ಶನಿವಾರ ರಾಷ್ಟ್ರೀಯ ಆರೋಗ್ಯ ಆಯೋಗವು 13 ಹೊಸ ಆಮದಾದ ಪ್ರಕರಣಗಳನ್ನ ವರದಿ ಮಾಡಿದೆ. ಇನ್ನು 85,659 ಮಂದಿಯಲ್ಲಿ 4,634 ಮಂದಿ ಸಾವನ್ನಪ್ಪಿರುವುದಾಗಿ ಚೀನಾ ವರದಿ ಮಾಡಿದೆ.

ಇನ್ನು 11 ಮಿಲಿಯನ್ ಜನರನ್ನ ಪರೀಕ್ಷಿಸಿದ ನಂತರ ಚೀನಾ ನಗರದಲ್ಲಿ ಯಾವುದೇ ಹೊಸ ಕರೋನವೈರಸ್ ಪ್ರಕರಣಗಳು ಕಂಡುಬಂದಿಲ್ಲ.
error: Content is protected !!