ರಾಂಚಿ: ಇತ್ತೀಚಿಗೆ ಬಿಹಾರದಲ್ಲಿ ನಡೆಯುತ್ತಿರುವ ಕಳ್ಳತನಗಳು ಸಾಕಷ್ಟು ಜನಪ್ರಿಯವಾಗಿವೆ. ಅನೇಕ ಸುದ್ದಿಗಳನ್ನ ನೀವು ಕೂಡ ನೋಡಿದ್ದೀರಾ, ಕೇಳಿದ್ದೀರಾ ಕೂಡ. ಕೆಲವು ದಿನಗಳ ಹಿಂದೆ, ನೀವು ಮೊಬೈಲ್ ಟವರ್ ಗಳು ಮತ್ತು ಸೇತುವೆಗಳ ಕಳ್ಳತನದ ಸುದ್ದಿಗಳನ್ನು ನೀವು ಓದಿರಬಹುದು.
ಈಗ ಮತ್ತೊಂದು ಪ್ರಕರಣ ಬಂದಿದೆ, ಅದನ್ನು ನೀವು ಓದಿದ್ರೆ ಖಂಡಿತ ದಿಗ್ಭ್ರಮೆಗೊಳ್ಳುತ್ತೀರಾಕೂಡ. ಚಲಿಸುತ್ತಿರುವ ಸರಕು ಸಾಗಣೆ ರೈಲಿನಿಂದ ತೈಲವನ್ನು ಕದಿಯುತ್ತಿರುವ ಬಿಹಾರದ ಕಳ್ಳರು ಸಿಕ್ಕಿಬಿದ್ದಿರುವ ಹೊಸ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಪಾಟ್ನಾದ ಆಡಳಿತಾತ್ಮಕ ಉಪವಿಭಾಗವಾದ ಬಿಹ್ಟಾ ಮೂಲಕ ಹಾದುಹೋಗುವ ತೈಲ ಟ್ಯಾಂಕರ್ ರೈಲನ್ನು ಬಿಹಾರದ ಕಳ್ಳರು ಮಾಡುತ್ತಿರುವ ಕೆಲಸಗಳನ್ನು @KhatoonShamsida ಎಂಬ ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋವನ್ನು ಫೋಸ್ಟ್ ಹಾಕಿದ್ದಾರೆ.
ನೀವು ವೀಡಿಯೊವನ್ನು ನೋಡಿದರೆ, ಬಕೆಟ್ನಲ್ಲಿ ಎಣ್ಣೆಯನ್ನು ತುಂಬಿಸುವಾಗ ರೈಲ್ವೆ ಸೇತುವೆಯನ್ನು ಕೂಡ ಕಾಣಬಹುದಾಗಿದೆ. ಇದಲ್ಲದೇ ಗೂಡ್ಸ್ ರೈಲು ಅದರ ಸ್ಥಳವನ್ನು ತಲುಪುವ ಮೊದಲೇ, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ನ ತೈಲ ಡಿಪೋಗೆ ಹೋಗುತ್ತಿದ್ದ ತೈಲವನ್ನು ಕಳ್ಳರು ಕದಿಯುತ್ತಿದ್ದಾರೆ.
बिहार में चलती मालगाड़ी ट्रेन से तेल होने लगा चोरी
बता दे आपको ये वीडियो बिहार के पटना जिले बिहटा नगर का है चलती हुई मालगाड़ी ट्रेन से चोरी करने मंजर। pic.twitter.com/ZpnbUSELqG— Shamsida Khatoon (@KhatoonShamsida) December 4, 2022