ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 19 ರನ್ ಗಳಿಸಿ

ಔಟಾದರು. ಆದರೆ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಬ್ರಿಸ್ಬೇನ್ ನ ಗಬ್ಬಾದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಆರು ರನ್ ಗಳಿಂದ ಸೋಲಿಸಿತು. ಪಂದ್ಯದಲ್ಲಿ ಭಾರತ ಉತ್ತಮವಾಗಿ ಬೌಲಿಂಗ್ ಮಾಡಿದ್ದಲ್ಲದೆ, ಅತ್ಯುತ್ತಮ ಫೀಲ್ಡಿಂಗ್ ಮೂಲಕ ಅನೇಕ ಆಟಗಾರರನ್ನು ಪೆವಿಲಿಯನ್ ಗೆ ಕಳುಹಿಸಿತು. ವಿಶೇಷವಾಗಿ ವಿರಾಟ್ ಕೊಹ್ಲಿ ಅವರ ಫೀಲ್ಡಿಂಗ್ ನೋಡಲು ಚೆನ್ನಾಗಿತ್ತು. ತನ್ನ 33ನೇ ವಯಸ್ಸಿನಲ್ಲಿಯೂ ಕೊಹ್ಲಿ ಮೈದಾನದಲ್ಲಿ ಚುರುಕುತನವನ್ನು ತೋರಿಸಿದರು.ಕೊಹ್ಲಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

https://twitter.com/sports4game/status/1582116143396888576?ref_src=twsrc%5Etfw%7Ctwcamp%5Etweetembed%7Ctwterm%5E1582116143396888576%7Ctwgr%5E60684f2b80822c2e56ec607940d29dccc3d7c179%7Ctwcon%5Es1_&ref_url=https%3A%2F%2Fnewsfirstlive.com%2F2022%2F10%2F18%2Fvirat-kohli-takes-one-handed-blinder-at-long-on-to-dismiss-pat-cummins-639599%2F

Share.
Exit mobile version