ಗುವಾಹಟಿ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಭಾನುವಾರ ನಡೆದ ಟಿ20 ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಭಾರತದ ಎರಡನೇ T20I ಸಂದರ್ಭದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ 28 ಎಸೆತಗಳಲ್ಲಿ 49 ರನ್ (1 ಸಿಕ್ಸರ್, 7 ಬೌಂಡರಿ) ಬಾರಿಸಿದರು.

ಒಟ್ಟಾರೆಯಾಗಿ ಕೊಹ್ಲಿ 11,000 ಟಿ20 ರನ್‌ಗಳ ಗಡಿ ದಾಟಿದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಕ್ರಿಸ್ ಗೇಲ್ (14,562) ಅಗ್ರಸ್ಥಾನದಲ್ಲಿದ್ದರೆ, ಕೀರಾನ್ ಪೊಲಾರ್ಡ್ (11,915) ಮತ್ತು ಶೋಯೆಬ್ ಮಲಿಕ್ (11,902) ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Watch Video: ಸುತ್ತಲೂ ಹಿಮದಿಂದ ಆವೃತವಾದ ವಿಶ್ವದ ಅತಿ ಎತ್ತರದ ʻಶಿವ ದೇವಾಲಯʼದ ಅದ್ಭುತ ದೃಶ್ಯ ವೈರಲ್‌

BREAKING NEWS: ಜಮ್ಮು ಮತ್ತು ಕಾಶ್ಮೀರ ಕಾರಾಗೃಹದ ಹಿರಿಯ ಪೊಲೀಸ್ ಅಧಿಕಾರಿಯ ಹತ್ಯೆ, ಮನೆಯಲ್ಲೇ ಕೃತ್ಯವೆಸಗಿ ಆರೋಪಿ ಎಸ್ಕೇಪ್

BIGG BREAKING NEWS : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಘೋರ ದುರಂತ : ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಸಾಮೂಹಿಕ ಆತ್ಮಹತ್ಯೆ

Share.
Exit mobile version