ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಥುರಾದಲ್ಲಿ ಶಾಲೆಯೊಂದು ಬುಧವಾರ ಸುರಿದ ಮಳೆಗೆ ಜಲಾವೃತವಾಗಿದೆ. ಹೀಗಾಗಿ, ಶಾಲೆಯ ಗೇಟ್‌ನಿಂದ ಕೊಠಡಿಗೆ ಹೋಗಲು ವಿದ್ಯಾರ್ಥಿಗಳು ಪ್ಲಾಸ್ಟಿಕ್ ಕುರ್ಚಿಗಳನ್ನು ಸಾಲಾಗಿ ಜೋಡಿಸಿದ್ದಾರೆ. ಇದರ ಮೇಲೆ ಶಿಕ್ಷಕಿಯೊಬ್ಬರು ಹಾದುಹೋಗುವ ದೃಶ್ಯ ಎಲ್ಲೆಡೆ ವೈರಲ್‌ ಆದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ.

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬಲ್ದೇವ್ ಪ್ರದೇಶದ ಗ್ರಾಮ ಪಂಚಾಯತ್ ದಘೇಟಾದ ಪ್ರಾಥಮಿಕ ಶಾಲಾ ಆವರಣ ಮಳೆ ನೀರಿನಿಂದ ಜಲಾವೃತವಾಗಿದೆ. ಹೀಗಾಗಿ ಇಲ್ಲಿನ ಗೇಟ್‌ನಿಂದ ಶಾಲಾ ಕೊಠಡಿಗೆ ಹೋಗಲು ನೀರಿನಲ್ಲೇ ಹಾದು ಹೋಗಬೇಕು. ಹೀಗಾಗಿ, ಅಲ್ಲಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕಿಗಾಗಿ ಪ್ಲಾಸ್ಟಿಕ್ ಕುರ್ಚಿಗಳನ್ನು ಸಾಲಾಗಿ ಜೋಡಿಸುವ ಮೂಲಕ ಗೇಟ್‌ನಿಂದ ಶಾಲಾ ಕೊಠಡಿಗೆ ತೆರಳಲ್ಲು ಸಹಾಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ, ವಿದ್ಯಾರ್ಥಿಗಳು ಸಾಲಾಗಿ ಜೋಡಿಸಿರುವ ಕುರ್ಚಿಗಳ ಮೇಲೇರಿ ಶಿಕ್ಷಕಿಯೊಬ್ಬರು ಹಾದು ಹೋಗುತ್ತಿರುವುದನ್ನು ನೋಡಬಹುದು.

BREAKING NEWS : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ : ಈವರೆಗೆ 21 ಶಂಕಿತರು ಪೊಲೀಸ್ ವಶಕ್ಕೆ

ವಿದ್ಯಾರ್ಥಿಯಿಂದ ಯುಪಿಯ ಶಿಕ್ಷಕಿಯೊಬ್ಬಳು ಮಸಾಜ್ ಮಾಡಿಸಿಕೊಳ್ತಿದ್ದ Viral Video | ವೀಕ್ಷಿಸಿ

Video: ವೀಲ್‌‌‌ಚೇರ್ ಮೂಲಕ ಆಹಾರ ತಲುಪಿಸುತ್ತಿರುವ ವಿಶೇಷ‌ಚೇತನ: ನೆಟ್ಟಿಗರ‌ ಹೃದಯ‌ ಗೆದ್ದ Zomato ಡೆಲಿವರಿ ಬಾಯ್

Share.
Exit mobile version