ರಾಜಸ್ಥಾನ: ತನ್ನ ದೀರ್ಘಕಾಲದ ಸಂಗಾತಿ ಸಾವನ್ನಪ್ಪಿದ್ದು, ಅದರ ಅಂತ್ಯಕ್ರಿಯೆಗೆ ಇಬ್ಬರು ವ್ಯಕ್ತಿಗಳು ನವಿಲನ್ನು ಹೊತ್ತೊಯ್ಯುವ ಸಂದರ್ಭದಲ್ಲಿ ಅದನ್ನೇ ಹಿಂಬಾಲಿಸುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ಈ ಘಟನೆ ರಾಜಸ್ಥಾನದ ಕುಚೇರಾ ಪಟ್ಟಣದಲ್ಲಿ ನಡೆದಿದೆ.
ರಾಜಸ್ಥಾನದ ಕುಚೇರಾ ಪಟ್ಟಣದಲ್ಲಿ ಈ ಘಟನೆ ನಡೆದಿರುವ ಘಟನೆ ಎಂದು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ‘ನವಿಲು ತನ್ನ ಸಾವಿನ ನಂತರ ದೀರ್ಘಕಾಲದ ಸಂಗಾತಿಯನ್ನು ಬಿಡಲು ಬಯಸುವುದಿಲ್ಲ. ಇದು ಹೃದಯ ಸ್ಪರ್ಶದ ವೀಡಿಯೋʼ ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
The peacock doesn’t want to leave the long time partner after his death. Touching video. Via WA. pic.twitter.com/ELnW3mozAb
— Parveen Kaswan (@ParveenKaswan) January 4, 2022
ನವಿಲು ತನ್ನ ಸಂಗಾತಿಯೊಂದಿಗೆ ನಾಲ್ಕು ವರ್ಷಗಳ ಕಾಲ ವಾಸಿಸುತ್ತಿತ್ತು ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ. ನವಿಲು ಸತ್ತ ನಂತರವೂ ತನ್ನ ಸಂಗಾತಿಯನ್ನು ಬಿಡಲು ನಿರಾಕರಿಸಿದೆ. ವೀಡಿಯೊದಲ್ಲಿ ಇಬ್ಬರು ಪುರುಷರು ನವಿಲಿನ ಸಂಗಾತಿಯ ಮೃತದೇಹವನ್ನು ಹೊತ್ತೊಯ್ಯುತ್ತಿರುವುದನ್ನು ಕಾಣಬಹುದು. ಸತ್ತ ನವಿಲನ್ನು ಅದರ ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗುವಾಗ ಅದರ ಪಾಲುದಾರನು ಪುರುಷರನ್ನು ಹಿಂಬಾಲಿಸುವ ದೃಶ್ಯ ಮನಕಲಕುವಂತಿದೆ. 19 ಸೆಕೆಂಡುಗಳ ವೀಡಿಯೊ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 15,000 ಲೈಕ್‌ಗಳನ್ನು ಪಡೆದುಕೊಂಡಿದೆ.
ಸುಂದರವಾದ ಪಕ್ಷಿಗಳು ವಾಸ್ತವವಾಗಿ ಬಹುಪತ್ನಿತ್ವವನ್ನು ಹೊಂದಿವೆ. ನವಿಲುಗಳು ವಾರ್ಷಿಕ ಆಧಾರದ ಮೇಲೆ ಪಾಲುದಾರರನ್ನು ಬದಲಾಯಿಸಲು ಹೆಸರುವಾಸಿಯಾಗಿದೆ. ವಸಂತ ಕಾಲದಲ್ಲಿ ಸಂಗಾತಿಯನ್ನು ಆಕರ್ಷಿಸುವ ಸಲುವಾಗಿ ನವಿಲುಗಳು ಗರಿ ಬಿಚ್ಚಿ ನಾಟ್ಯ ಮಾಡುವ ದೃಶ್ಯ ಅಮೋಘವಾಗಿರುತ್ತದೆ.
Assembly polls 2022:ಕೋವಿಡ್ ಹೆಚ್ಚಳ: ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಭಾರತೀಯ ಚುನಾವಣಾ ಆಯೋಗಕ್ಕೆ ಮಾಹಿತಿ