ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸಾಮಾನ್ಯವಾಗಿ ಮೈದಾನದಲ್ಲಿ ತಮ್ಮ ಭಾವನೆಗಳನ್ನ ವ್ಯಕ್ತ ಪಡಿಸೋದಿಲ್ಲ. ಆದ್ರೆ, ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನ ರಿಷಭ್ ಪಂತ್ ಶತಕ ಬಾರಿಸಿದ್ದೇ ತಡ ರಾಹುಲ್‌ ಸಂತೋಷಕ್ಕೆ ಪಾರವೇ ಇರ್ಲಿಲ್ಲ. ಡ್ರೆಸ್ಸಿಂಗ್ ರೂಮ್‌ನಿಂದ ಆಟದ ಮೇಲೆ ನಿಗಾ ವಹಿಸಿದ್ದ ದ್ರಾವಿಡ್, ತಮ್ಮ ಆಸನದಿಂದ ಎದ್ದು, ರಿಷಭ್ 100 ರನ್‌ಗಳ ಗಡಿಯನ್ನ ದಾಟಲು 2ನೇ ರನ್ ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದಂತೆ ಎರಡೂ ಕೈಗಳನ್ನ ಮೇಲಕ್ಕೆತ್ತಿ, ಕೂಗುತ್ತಾ ಸಂಭ್ರಮಿಸಿದರು.

ಮುಖ್ಯ ಕೋಚ್ ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿರುವಂತೆ ಕಾಣ್ತಿತ್ತು. ದ್ರಾವಿಡ್ ಯುವಕನ ಮೈಲಿಗಲ್ಲನ್ನ ತುಂಬಾನೇ ಖುಷಿಯಿಂದ ಆಚರಿಸಿದರು. ಅಂದ್ಹಾಗೆ, ರಿಷಭ್ ಕೇವಲ 89 ಎಸೆತಗಳಲ್ಲಿ 100 ರನ್ ಗಡಿ ದಾಟಿದರು.

ರಿಷಭ್ ಭಾರತದ ಪರ ಸಮಯೋಚಿತ ಶತಕವನ್ನ ಬಾರಿಸಿದ್ದು, ಅವರ ಹೊಡೆತವು ಸಂದರ್ಶಕರನ್ನ ಕಠಿಣ ಪರಿಸ್ಥಿತಿಯಿಂದ ರಕ್ಷಿಸಿದೆ. ಜಸ್ಪ್ರೀತ್ ಬುಮ್ರಾ ನೇತೃತ್ವದ ತಂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಾಗ 71/4 ರನ್ ಗಳಿಸಿತ್ತು. ಮೊದಲು ಶ್ರೇಯಸ್ ಅಯ್ಯರ್ ಅವರೊಂದಿಗೆ ರಿಷಭ್ 5ನೇ ವಿಕೆಟ್‌ಗೆ 27 ರನ್ ಸೇರಿಸಿದರು. ಆದ್ರೆ, ಅಯ್ಯರ್‌ 11 ಎಸೆತಗಳಲ್ಲಿ 15 ರನ್‌ಗೆ ನಿರ್ಗಮಿಸಿದರು.

ಅಯ್ಯರ್ ಔಟಾದ ನಂತರ, ರಿಷಭ್ ಅವರೊಂದಿಗೆ ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ ಸೇರಿಕೊಂಡರು. ಜಡೇಜಾ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸಮಯವನ್ನ ತೆಗೆದುಕೊಳ್ಳುತ್ತಿದ್ದರೆ, ರಿಷಭ್ ವೇಗವಾಗಿ ಸ್ಕೋರ್ ಮಾಡಿ, 130ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ್ರು. ಈ ಮೂಲಕ 6ನೇ ವಿಕೆಟ್ʼಗೆ 200ಕ್ಕೂ ಹೆಚ್ಚು ರನ್ ಸೇರಿಸಲು ಕಾರಣರಾದ್ರು.

Share.
Exit mobile version