ನವದೆಹಲಿ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗೆ ಖಿಚಡಿಯನ್ನ ಹೇಗೆ ಮಾಡಬೇಕೆಂದು ಕಲಿಸಿದ್ದಾರೆ. ಅವರು ಅದರ ವೀಡಿಯೊವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಬಳಕೆದಾರರು ತಮ್ಮ ಪ್ರತಿಕ್ರಿಯೆಯನ್ನ ನೀಡುತ್ತಿದ್ದಾರೆ.
ವಿಡಿಯೋ ಹಂಚಿಕೊಂಡ ಸಚಿವೆ
ಸಚಿವೆ ಸ್ಮೃತಿ ಇರಾನಿ ಈ ವೀಡಿಯೊವನ್ನ ಹಂಚಿಕೊಂಡಿದ್ದು, ಈ ವೀಡಿಯೊವನ್ನ ಇಲ್ಲಿಯವರೆಗೆ 7 ಲಕ್ಷ 84 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸುಮಾರು 11 ಸಾವಿರ ಜನರು ಈ ವೀಡಿಯೊವನ್ನು ಲೈಕ್ ಮಾಡಿದ್ದಾರೆ ಮತ್ತು 1292 ಜನರು ಅದನ್ನ ರಿಟ್ವೀಟ್ ಮಾಡಿದ್ದಾರೆ.
Recognising the Super Food of India and its POSHAN component..
When @BillGates gave tadka to Shree Ann Khichdi! pic.twitter.com/CYibFi01mi
— Smriti Z Irani (@smritiirani) March 2, 2023
ಖಿಚಡಿ ಸವಿದ ಬಿಲ್ ಗೇಟ್ಸ್
ವೀಡಿಯೊದಲ್ಲಿ, ಸ್ಮೃತಿ ಇರಾನಿ ಬಿಲ್ ಗೇಟ್ಸ್ಗೆ ಖಿಚಡಿ ಮಾಡುವುದು ಹೇಗೆ ಎಂದು ಕಲಿಸುವುದನ್ನು ನೀವು ನೋಡಬಹುದು. ನಂತ್ರ, ಅವ್ರು ಖಿಚಡಿಯನ್ನ ಬೌಲ್’ಗೆ ಹಾಕಿ ಬಿಲ್ ಗೇಟ್ಸ್’ಗೆ ನೀಡುತ್ತಾರೆ. ಅಮೇಲೆ ಗೇಟ್ಸ್ ಖಿಚಡಿಯನ್ನು ಸವಿಯುವುದನ್ನ ಸಹ ಕಾಣಬಹುದು.
‘ಈಗ ಈ ಖಿಚ್ಡಿಯನ್ನು ಮೈಕ್ರೋಸಾಫ್ಟ್ ಖಿಚ್ಡಿ ಎಂದು ಕರೆಯಲಾಗುತ್ತದೆ’
ಬಳಕೆದಾರರು ವೀಡಿಯೊದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನ ನೀಡುತ್ತಿದ್ದು, ಒಬ್ಬ ಬಳಕೆದಾರ “ಇದು ತುಂಬಾ ಒಳ್ಳೆಯದು. ಭಾರತದ ಸಾಂಪ್ರದಾಯಿಕ ಸಸ್ಯಾಹಾರಿ ಆಹಾರವನ್ನ ಜಗತ್ತಿಗೆ ಪರಿಚಯಿಸಬೇಕು” ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, “ಅಂತಿಮವಾಗಿ ರುಚಿಯನ್ನ ಖಿಚಡಿಗೆ ಸೇರಿಸಲಾಗಿದೆ” ಎಂದಿದ್ರೆ, ಮೂರನೇ ಬಳಕೆದಾರರು “ಈಗ ಈ ಖಿಚ್ಡಿಯನ್ನ ಮೈಕ್ರೋಸಾಫ್ಟ್ ಖಿಚ್ಡಿ” ಎಂದು ಕರೆದದ್ದಾರೆ.
ಪ್ರಧಾನಿ ಮೋದಿ, ಶಿಂಜೋ ಅಬೆ ‘ಕ್ವಾಡ್’ ನ ‘ಫಾದರ್ಸ್’ ಎಂದ ಆಸ್ಟ್ರೇಲಿಯಾ ಮಾಜಿ ಪಿಎಂ ಟೋನಿ ಅಬಾಟ್
ದೊಡ್ಮನೆ ಮೊಮ್ಮಗನ ಚೊಚ್ಚಲ ಸಿನೆಮಾ ‘ಯುವ’ಪರ್ವ ಆರಂಭ ಯವರಾಜ್ ಕುಮಾರ್ ಮೊದಲ ಸಿನೆಮಾ ‘ಯುವ’ ಟೈಟಲ್ ಲಾಂಚ್