ನವದೆಹಲಿ : ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಕಾಂಗ್ರೆಸ್‌ನ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿತು. ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರೆ, ರಾಜ್ಯಸಭಾ ಸಂಸದ ಕಪ್ಪು ಕುರ್ತಾ ಮತ್ತು ಪೇಟ ಧರಿಸಿ ಸಂಸತ್ತಿಗೆ ಬಂದರು. ಇದಲ್ಲದೆ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಿಂದ ಸಂಸತ್ತಿನವರೆಗೆ ಪ್ರತಿಭಟನೆ ನಡೆಸಿದ್ರು. ಈ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನೂ ವಶಕ್ಕೆ ತೆಗೆದು, ಬಿಡುಗಡೆ ಮಾಡಿದರು. ಏತನ್ಮಧ್ಯೆ, ಪ್ರಿಯಾಂಕಾ ಗಾಂಧಿಯವರ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದ್ದು, ಅದರಲ್ಲಿ ಅವ್ರು ತೀವ್ರ ಕೋಪದಲ್ಲಿ ಕಾಣಿಸಿಕೊಂಡಿದ್ದಾರೆ.

ಮಹಿಳಾ ಪೋಲೀಸರೊಬ್ಬರ ಕೈ ತಿರುಚುವಷ್ಟು ಸಿಟ್ಟು ಪ್ರಿಯಾಂಕಾ ಗಾಂಧಿಗೆ ಬಂದಿದೆ. ಅದ್ರಂತೆ, ಈ ಫೋಟೋದಲ್ಲಿ ಮಹಿಳಾ ಪೋಲೀಸರ ಕೈಯನ್ನ ಹೇಗೆ ಗಟ್ಟಿಯಾಗಿ ಹಿಡಿದು ತಿರುಚುತ್ತಿದ್ದಾರೆ ಅನ್ನೋದನ್ನ ಕಾಣಬಹುದು. ಬಿಜೆಪಿ ನಾಯಕ ಅಮಿತ್ ಮಾಳವೀಯ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದು, “ಪ್ರಿಯಾಂಕಾ ವಾದ್ರಾ ಅವರು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಅವ್ರು ಪೊಲೀಸರ ಕೈ ಹಿಡಿದು ತಿರುಚಿದ್ದು, ನಂತ್ರ ನಮ್ಮ ಮೇಲೆ ಹಲ್ಲೆ ಎಂದು ಪೊಲೀಸರನ್ನ ದೂರುತ್ತಾರೆ” ಎಂದಿದ್ದಾರೆ.

ಇದೀಗ ಈ ಫೋಟೋ ಮತ್ತು ಪ್ರಿಯಾಂಕಾ ಗಾಂಧಿಯವರ ಕೋಪದ ವರ್ತನೆಯನ್ನ ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರೂ ತುಂಬಾ ಕೋಪಗೊಂಡಿದ್ದಾರೆ. ಒಬ್ಬ ಬಳಕೆದಾರರು, ‘ಮೇಡಂ ನೀವು ಯಾರ ಕೈಯನ್ನ ತಿರುಗಿಸುತ್ತಿದ್ದೀರಿ. ಅವ್ರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್‌ ಹುದ್ದೆಗೆರಿರುವ ಈ ದೇಶದ ಮಗಳು. ಇನ್ನು ಅವ್ರ ತಂದೆ, ತಾಯಿ, ಸಹೋದರ ಮತ್ತು ಪತಿ ಯಾವುದೇ ಕಳ್ಳತನ ಮಾಡಿಲ್ಲ” ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ಪ್ರಿಯಾಂಕಾ ಗಾಂಧಿ ಒಳ್ಳೆಯವರು ಮತ್ತು ಕೆಟ್ಟವರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು ಕೆಲವು ಬಳಕೆದಾರರು ಪ್ರಿಯಾಂಕಾ ಗಾಂಧಿಯನ್ನ ಬೆಂಬಲಿಸುತ್ತಿದ್ದು, ಒಬ್ಬ ಬಳಕೆದಾರರು ‘ಅವರು ಗಾಂಧಿ… ದಬ್ಬಾಳಿಕೆ ವಿರುದ್ಧ ನಿಂತದ್ದು ಅವರ ಇತಿಹಾಸ’ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರನು ತಮಾಷೆಯ ರೀತಿಯಲ್ಲಿ ‘ಒಮ್ಮೆ ಯೋಚಿಸಿ, ರಾಬರ್ಟ್ ವಾದ್ರಾ ಅವರನ್ನ ಮನೆಯಲ್ಲಿ ಹೇಗೆ ನಿಭಾಯಿಸುತ್ತಿರಬೇಕು? ಮತ್ತವರ ಸ್ಥಿತಿ ಏನಾಗಬಹುದು? ಎಂದಿದ್ದಾರೆ.

Share.
Exit mobile version