ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪತಿ ತನಗೆ ಮೋಸ ಮಾಡುತ್ತಿದ್ದಾನೆ ಎಂಬ ಅನುಮಾನದಿಂದ ಮಹಿಳೆ ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾಳೆ. ಅದ್ರಂತೆ, ಆತನನ್ನ ವೇಶ್ಯಾಗೃಹದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿಯಲು ಪತ್ನಿ ಬಯಸಿದ್ದಳು. ಆದ್ರೆ, ಕಥೆಯ ಕೊನೆಯಲ್ಲಿ ಕೊನೆಯಲ್ಲಿ ಊಹಿಸಲಾಗದ ಟ್ವಿಸ್ಟ್ ಸಿಕ್ಕಿದೆ. ಇಷ್ಟಕ್ಕೂ ಅಲ್ಲಿ ನಡೆದಿದ್ದಾದ್ರು ಏನು.?
ಅಸಲಿಗೆ ಥಾಯ್ಲೆಂಡ್ನ ಮಹಿಳೆಯೊಬ್ಬರು ತಮ್ಮ ಪತಿ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ, ಅದನ್ನ ಸಾಬೀತು ಪಡಿಸಲು ಆಕೆ ಮುಂದಾಗಿದ್ದಾಳೆ. ಅದ್ರಂತೆ, ಆಕೆ ಅವನ ಪರ್ಸ್ನಲ್ಲಿ ಲೇಡೀಸ್ ಕ್ಲಬ್ (Sex Shop) ರಶೀದಿಯನ್ನ ಕಂಡುಕೊಂಡಿದ್ದು, ಆ ಕ್ಲಬ್ ಬಗ್ಗೆ ವಿವರ ತಿಳಿಯಲು ಮಹಿಳೆ ಕಾರ್ಡ್ನಲ್ಲಿರುವ ಸಂಖ್ಯೆಗೆ ಕರೆ ಮಾಡಿದ್ದಾಳೆ. ಅಲ್ಲಿ ಮ್ಯಾನೇಜರ್ ‘ಬಂದು ನೋಡಿ’ ಎಂದು ಹೇಳಿದಾಗ, ಆಕೆಯೂ ತನ್ನ ಗಂಡನನ್ನ ಅಲ್ಲಿಯೇ ರೆಡ್ ಹ್ಯಾಂಡ್ ಆಗಿ ಹಿಡಿಯುವ ಇಚ್ಛೆಯಿಂದ ತೆರಳಿದ್ದಾಳೆ.
ಕಥೆಯ ಟ್ವಿಸ್ಟ್ ಎಂಬಂತೆ ಆಕೆ ವೇಶ್ಯಾಗೃಹಕ್ಕೆ ಹೋದಾಗ ಮ್ಯಾನೇಜರ್ ಕೆಲಕ್ಕೆ ಬಂದಿರುವುದಾಗಿ ಭಾವಿಸಿ, ಇಂಟರ್ವ್ಯೂ ಮಾಡಿ ಕೆಲಸವನ್ನೂ ಕೊಡಿಸಿದ್ದಾನೆ. ಇನ್ನು ಆ ಮಹಿಳೆಯೂ ಕೆಲಸಕ್ಕೆ ಹಾಜರಾಗಲು ಒಪ್ಪಿದ್ದಾಳೆ. ‘ಮೊದಲಿಗೆ ಆ ಸ್ಥಳದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ನನ್ನ ಉದ್ದೇಶವಾಗಿರಲಿಲ್ಲ.. ಆದರೆ ಅಲ್ಲಿ ಏನಾಗುತ್ತಿದೆ ಎಂಬುದನ್ನ ತಿಳಿದುಕೊಳ್ಳುವ ಕುತೂಹಲವೇ ನನ್ನನ್ನು ಆಫರ್ ಸ್ವೀಕರಿಸುವಂತೆ ಮಾಡಿದೆ’ ಎಂದು ಪೋಸ್ಟ್ ಮೂಲಕ ಮಹಿಳೆ ನೆಟ್ಟಿಗರಿಗೆ ತಿಳಿಸಿದ್ದಾಳೆ. ಇನ್ನು ಈಗಲೂ ನನ್ನ ಗಂಡನಿಗೆ ತಿಳಿಯದಂತೆ ಆ ಶಾಪ್ನಲ್ಲಿ ಗುಟ್ಟಾಗಿ ಕೆಲಸ ಮುಂದುವರಿಸುತ್ತಿದ್ದೇನೆ ಎಂದಿದ್ದಾಳೆ.
ಕೊರೊನಾ ಪ್ರಪಂಚದಿಂದ ಬೇಗ ಕೊನೆಗೊಳ್ಳೋದಿಲ್ಲ, ‘ವ್ಯಾಕ್ಸಿನೇಷನ್ ಅಗತ್ಯ’ ; ಹೊಸ ಅಧ್ಯಯನ
ಫೆ.3 ರಿಂದ 6 ರವರೆಗೆ ಮಡಿಕೇರಿಯಲ್ಲಿ ಫಲಪುಷ್ಪ ಪ್ರದರ್ಶನ |Flower Show
JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ನಾಳೆ ಕಲಬುರಗಿಯಲ್ಲಿ ‘ಉದ್ಯೋಗ ಮೇಳ’ ಆಯೋಜನೆ