ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್, ಬಾಲಿವುಡ್, ಕಾಲಿವುಡ್ ಹೀಗೆ ಒಂದೊಂದೇ ಇಂಡಸ್ಟ್ರೀಯಲ್ಲೂ ಸ್ಟಾರ್ ಹೀರೋಗಳ ಜೊತೆ ಮಿರ ಮಿರ ಮಿಂಚ್ತಿರುವ ಗೂಗಲ್ ನ್ಯಾಷನಲ್ ಕ್ರಶ್ ತಮಿಳಿನ ಸೂಪರ್ ಸ್ಟಾರ್ ಇಳಯದಳಪತಿ 66ನೇ ಸಿನಿಮಾದಲ್ಲಿ ನಟಿಸ್ತಿರುವ ವಿಚಾರ ಗೊತ್ತೇ ಇದೆ.
ಇದೀಗ ಈ ಸಿನಿಮಾದ ಶೂಟಿಂಗ್ ಗೆ ಕಿಕ್ ಸ್ಟಾರ್ಸ್ ಸಿಕ್ಕಿದ್ದು, ರಶ್ಮಿಕಾ ಇಂದಿನಿಂದ ತಮ್ಮ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ವಂಶಿ ಸರ್, ವಿಜಯ್ ಸರ್ ಹಾಗೂ ಯೋಗಿಬಾಬು ಸರ್ ಜೊತೆ ಕೆಲಸ ಮಾಡ್ತಿರುವುದು ಖುಷಿ ಕೊಟ್ಟಿದೆ. ನಾನು ಈ ಸಿನಿಮಾದ ಭಾಗವಾಗಿದ್ದು, ಚಿತ್ರದಲ್ಲಿ ಕೆಲಸ ಮಾಡ್ತಿರುವುದು ಸಂತಸ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾಗೆ ಮೊದಲಿನಿಂದಲೂ ಇಳಯದಳಪತಿ ವಿಜಯ್ ಜೊತೆ ಸಿನಿಮಾ ಮೂಲವ ಕನಸಿತ್ತು. ಆ ಕನಸು ಈಡೇರಿದೆ. ದಳಪತಿ ಅಭಿನಯದ 66ನೇ ಸಿನಿಮಾವನ್ನು ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿದ್ದು, ಖ್ಯಾತ ನಿರ್ಮಾಪಕ ದಿಲ್ ರಾಜು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಹೈದ್ರಾಬಾದ್ ನಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇಂದಿನಿಂದ ರಶ್ಮಿಕಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೇ ರಶ್ಮಿಕಾ ಕೈಯಲ್ಲಿ ಬೇಜಾನ್ ಸಿನಿಮಾಗಳಿವೆ. ಹಿಂದಿಯಲ್ಲಿ ಮಿಷನ್ ಮಂಜ್ನು, ಗುಡ್ ಬೈ, ಅನಿಮಲ್ ಸಿನಿಮಾದಲ್ಲಿ ನಟಿಸ್ತಿದ್ದು, ಈ ಸಿನಿಮಾಗಳ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2ದಲ್ಲಿಯೂ ರಶ್ಮಿಕಾ ನಾಯಕಿಯಾಗಿ ಅಭಿನಯಿಸ್ತಿದ್ದು, ಶೀರ್ಘದಲ್ಲಿಯೇ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.
#RashmikaMandanna: Went to #Thalapathy66 set. Met #Vamshi sir, #Vijay sir, #Yogibabu sir and the team. It feels so good, spending so much time with them. happy happy me. so grateful. pic.twitter.com/9qTzdGmwpv
— #Thalapathy66 (@Vijay66OffI_) May 13, 2022