ವಿಜಯಪುರ : ಅಕ್ರಮವಾಗಿ ಗೋವುಗಳ ಸಾಗಣೆ : ಗ್ರಾಮಸ್ಥರಿಂದ 110ಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ

ವಿಜಯಪುರ : ರಾಜ್ಯದಲ್ಲಿ ಗೋಹತ್ಯೆ ಹಾಗೂ ಅಕ್ರಮವಾಗಿ ಗೋವುಗಳ ಮಾರಾಟ ನಿಷೇಧವಿದ್ದರೂ ಕೂಡ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೆಬೇವನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರೇ ವಾಹನಗಳನ್ನು ಅಡ್ಡಗಟ್ಟಿ 110 ಕ್ಕೂ ಹೆಚ್ಚು ಗೋವು ಮತ್ತು ಕರುಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನೆರೆಯ ರಾಜ್ಯ ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಅಕ್ರಮವಾಗಿ ಗೋವು ಮತ್ತು ಕರುಗಳನ್ನು ಸಾಗಾಟ ಮಾಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.ತಡರಾತ್ರಿ ಬುಲೆರೋ ಪಿಕ್ ಅಪ್ … Continue reading ವಿಜಯಪುರ : ಅಕ್ರಮವಾಗಿ ಗೋವುಗಳ ಸಾಗಣೆ : ಗ್ರಾಮಸ್ಥರಿಂದ 110ಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ