ನವದೆಹಲಿ: 3,250 ಕೋಟಿ ರೂ. ಐಸಿಐಸಿಐ ಬ್ಯಾಂಕ್-ವಿಡಿಯೊಕಾನ್ ಸಾಲ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಡಿಯೋಕಾನ್(Videocon) ಗ್ರೂಪ್ ಸಂಸ್ಥಾಪಕ ವೇಣುಗೋಪಾಲ್ ಧೂತ್ ಅವರನ್ನು ಸುಮಾರು ಒಂದು ತಿಂಗಳ ಹಿಂದೆ ಬಂಧಿಸಿತ್ತು. ಆದ್ರೆ, ಇಂದು ಅವರಿಗೆ ಬಾಂಬೆ ಹೈಕೋರ್ಟ್ ಇಂದು ಮಧ್ಯಂತರ ಜಾಮೀನು ನೀಡಿದೆ.
ಇದೇ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಆಕೆಯ ಪತಿ ದೀಪಕ್ ಕೊಚ್ಚರ್ ಅವರನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಧೂತ್ ಅವರನ್ನು ಬಂಧಿಸಲಾಗಿತ್ತು.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಪಿಕೆ ಚವಾಣ್ ಅವರ ವಿಭಾಗೀಯ ಪೀಠವು 1 ಲಕ್ಷ ರೂ. ಮೌಲ್ಯದ ಶ್ಯೂರಿಟಿ ಮೇಲೆ ಅವರಿಗೆ ಜಾಮೀನು ನೀಡಿದೆ. ನಗದು ಜಾಮೀನು ನೀಡಲು ಮತ್ತು ಎರಡು ವಾರಗಳ ನಂತರ ಶ್ಯೂರಿಟಿ ಮೊತ್ತವನ್ನು ಠೇವಣಿ ಮಾಡಲು ನ್ಯಾಯಾಲಯ ಅವರಿಗೆ ಅನುಮತಿ ನೀಡಿದೆ.
2012 ರಲ್ಲಿ ವಿಡಿಯೋಕಾನ್ ಗ್ರೂಪ್‌ಗೆ ನೀಡಲಾದ 3,250 ಕೋಟಿ ರೂ. ಐಸಿಐಸಿಐ ಬ್ಯಾಂಕ್ ಸಾಲದಲ್ಲಿ ವಂಚನೆ ಮತ್ತು ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಈ ವಿಚಾರೆಣೆ ನಡೆಯುತ್ತಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, ಆರ್‌ಬಿಐ ಮಾರ್ಗಸೂಚಿಗಳು ಮತ್ತು ಬ್ಯಾಂಕ್‌ನ ಸಾಲ ನೀತಿಯನ್ನು ಉಲ್ಲಂಘಿಸಿ ವೇಣುಗೋಪಾಲ್ ಧೂತ್ ಅವರು ಪ್ರಮೋಟ್ ಮಾಡಿದ ವಿಡಿಯೋಕಾನ್ ಗ್ರೂಪ್ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್ 3,250 ಕೋಟಿ ರೂ. ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದೆ ಎಂದು ಸಿಬಿಐ ಆರೋಪಿಸಿದೆ.
40 ವರ್ಷಗಳ ಬಳಿಕ ಖುಲಾಯಿಸಿದ ಅದೃಷ್ಟ, ʻಲಾಟರಿʼಯಿಂದ 5 ಕೋಟಿ ರೂ. ಗೆದ್ದ ವೃದ್ಧ
ನಿಮ್ಮ ‘ಚರ್ಮವೂ ವಯಸ್ಸಾ’ದಂತೆ ಕಾಣುತ್ತಾ? ಈ ಆಹಾರ ಸೇವಿಸಿ, ಮುನ್ನೆಚ್ಚರಿಕೆ ವಹಿಸಿ | Anti Aging Tips
40 ವರ್ಷಗಳ ಬಳಿಕ ಖುಲಾಯಿಸಿದ ಅದೃಷ್ಟ, ʻಲಾಟರಿʼಯಿಂದ 5 ಕೋಟಿ ರೂ. ಗೆದ್ದ ವೃದ್ಧ
ನಿಮ್ಮ ‘ಚರ್ಮವೂ ವಯಸ್ಸಾ’ದಂತೆ ಕಾಣುತ್ತಾ? ಈ ಆಹಾರ ಸೇವಿಸಿ, ಮುನ್ನೆಚ್ಚರಿಕೆ ವಹಿಸಿ | Anti Aging Tips