ರಾಜಸ್ಥಾನ: ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಪತಿ ಮತ್ತು ಇತರ ಸಂಬಂಧಿಕರು ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಥಳಿಸಿರುವ ಘಟನೆ ನಡೆದಿದೆ.

ಮಹಿಳೆಯನ್ನು ಪತಿ ಆಕೆಯ ಸ್ನೇಹಿತನೊಂದಿಗೆ ನೋಡಿದ್ದಾನೆ. ಈ ವೇಳೆ ಕೋಪಗೊಂಡ ಪತಿ ಪತ್ನಿಯನ್ನು ಮರಕ್ಕೆ ಕಟ್ಟಿ ಥಳಿಸಿದ್ದು, ಏಳು ಗಂಟೆಗಳ ಕಾಲ ಮರದಲ್ಲೇ ಕಟ್ಟಿ ಹಾಕಿದ್ದರು. ಅಷ್ಟೇ ಅಲ್ಲದೇ, ಮಹಿಳೆಯೊಂದಿಗೆ ಕಾಣಿಸಿಕೊಂಡ ವ್ಯಕ್ತಿಗೂ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ಮಹಿಳೆಯ ಮೇಲೆ ಹಲ್ಲೆ ನಡೆದ ನಾಲ್ಕು ದಿನಗಳ ನಂತರ ನಿನ್ನೆ ರಾತ್ರಿ ಎಫ್‌ಐಆರ್‌ ದಾಖಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇದೀಗ ಸಂತ್ರಸ್ತೆಯ ಪತಿ ಮತ್ತು ಆಕೆಯ ಸೋದರ ಮಾವ ಹಾಗೂ ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆ.

ವಿಡಿಯೋವನ್ನು ಶೇರ್ ಮಾಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಟ್ವೀಟ್ ಮಾಡಿದ್ದಾರೆ: “ರಾಜಸ್ಥಾನದ ಗೃಹ ಇಲಾಖೆಯು ಗೂಂಡಾಗಳನ್ನು ಮುಕ್ತಗೊಳಿಸಿದೆ ಮತ್ತು ಅವರು ಹಸಿದ ತೋಳಗಳಂತೆ ಕಾಡುಗಳಲ್ಲಿ ಅಲೆದಾಡುತ್ತಿದ್ದಾರೆ. ಈ ವೀಡಿಯೊವನ್ನು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ. ಆದರೆ, ಇದು ಅರ್ಥಹೀನವಾಗಿದೆ. ನಾವು ಇದರ ವಿಎಉದ್ಧ ಧ್ವನಿ ಎತ್ತಬೇಕಾಗಿದೆ!” ಎಂದಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಶನಿವಾರ ಪ್ರಕರಣವನ್ನು ಗಮನಿಸಿದೆ. ರಾಜಸ್ಥಾನ ಡಿಜಿಪಿಗೆ ಪತ್ರ ಬರೆದಿರುವ ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು, ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಕೋರಿದ್ದಾರೆ ಮತ್ತು ಸಂತ್ರಸ್ತರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

BIGG NEWS : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

Breaking news:‌ ಇಂದು ಬೆಳಗ್ಗೆ ನೇಪಾಳದಲ್ಲಿ 5.5 ತೀವ್ರತೆಯ ಭೂಕಂಪ, ಬಿಹಾರದ ಕೆಲವು ಭಾಗಗಳಲ್ಲೂ ಕಂಪನದ ಅನುಭವ

Big news;‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್ ʻಬಿಂದ್ಯಾರಾಣಿ ದೇವಿʼಯನ್ನು ಅಭಿನಂದಿಸಿದ ಪ್ರಧಾನಿ ಮೋದಿ!

Share.
Exit mobile version