Video: ಅನನುಭವಿ ತಾಲಿಬಾನ್ ಪೈಲಟ್‌ನಿಂದ ಅಮೆರಿಕನ್ ಬ್ಲ್ಯಾಕ್ ಹಾಕ್ ಚಾಪರ್ ಪತನ, ಮೂವರು ಸಾವು

ಕಾಬೂಲ್‌: ತಾಲಿಬಾನ್ ಸದಸ್ಯನೊಬ್ಬ ಅಮೆರಿಕ ಸೇನೆಯ ಹೆಲಿಕಾಪ್ಟರ್ ಹಾರಿಸಲು ಯತ್ನಿಸಿ ಮೂವರನ್ನು ಬಲಿತೆಗೆದುಕೊಂಡ ಘಟನೆ ಸೆಪ್ಟೆಂಬರ್ 10‌ ರಿಂದ ಸದ್ದು ಮಾಡುತ್ತಿದೆ. ಆದರೆ, ಆ ದೃಶ್ಯಾವಳಿ ಇದೀಗ ಬಿಡುಗಡೆಯಾಗಿದೆ. ಅನನುಭವಿ ತಾಲಿಬಾನ್ ಪೈಲಟ್ $ 30 ಮಿಲಿಯನ್ ಅಮೆರಿಕನ್ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಅನ್ನು ಹಾರಿಸಲು ಯತ್ನಿಸಿದ್ದು ಅದು ಪತನಗೊಳ್ಳುವ ವೀಡಿಯೊ ವೈರಲ್‌ ಆಗಿದೆ. ಈ ದೃಶ್ಯವನ್ನು ಮತ್ತೊಬ್ಬ ತಾಲಿಬಾನ್ ಸದಸ್ಯ ಸೆರೆಹಿಡಿದಿದ್ದಾನೆ. 36-ಸೆಕೆಂಡಿನ ತುಣುಕಿನಲ್ಲಿ, ಚಾಪರ್ ಆಗಸದಲ್ಲಿ ಹಾರಾಟ ನಡೆಸಿದ ನಂತರ ನೆಲಕ್ಕೆ ಅಪ್ಪಳಿಸುವುದನ್ನು ನೋಡಬಹುದು. … Continue reading Video: ಅನನುಭವಿ ತಾಲಿಬಾನ್ ಪೈಲಟ್‌ನಿಂದ ಅಮೆರಿಕನ್ ಬ್ಲ್ಯಾಕ್ ಹಾಕ್ ಚಾಪರ್ ಪತನ, ಮೂವರು ಸಾವು