ರಾಜಸ್ಥಾನ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಕಾರಿಗೆ ಸರಪಳಿಯಲ್ಲಿ ಕಟ್ಟಿದ ನಾಯಿಯನ್ನು ಚಾಲಕ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.

ವೀಡಿಯೊವನ್ನು ಪೋಸ್ಟ್ ಮಾಡಿದ ಬಳಕೆದಾರರು ಇದನ್ನು ಭಾನುವಾರ ರಾಜಸ್ಥಾನದ ಜೋಧ್‌ಪುರದಲ್ಲಿ ಚಿತ್ರೀಕರಿಸಲಾಗಿದೆ. ಚಾಲಕ ವೈದ್ಯರಾಗಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ, ನಾಯಿಯನ್ನು ಕಾರಿಗೆ ಕಟ್ಟಿ ಓಡಿಸುತ್ತಿರುವುದನ್ನು ನೋಡಬಹುದು. ಪ್ರಾಣಿ ಹಿಂಸೆಯ ಕ್ಲಿಪ್ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ.

ಕಾರನ್ನು ಹಿಂಬಾಲಿಸಿಕೊಂಡು ಬಂದ ವಾಹನವೊಂದು ವಿಡಿಯೋ ಚಿತ್ರೀಕರಣ ಮಾಡಿದೆ. ಮೋಟಾರು ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬ ತನ್ನ ವಾಹನವನ್ನು ಕಾರಿನ ಮುಂದೆ ನಿಲ್ಲಿಸಿ ಚಾಲಕನನ್ನು ಬಲವಂತವಾಗಿ ನಿಲ್ಲಿಸುತ್ತಿರುವುದು ಕಂಡುಬರುತ್ತದೆ. ವಾಹನದ ಸುತ್ತ ಜಮಾಯಿಸಿ ಸ್ಥಳೀಯರು ನಾಯಿಯ ಸರಪಳಿ ಬಿಚ್ಚಿ ನಂತ್ರ ಅದನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.

ಎನ್ಜಿಒ ಡಾಗ್ ಹೋಮ್ ಫೌಂಡೇಶನ್ ಪೋಸ್ಟ್ ಮಾಡಿದ ಟ್ವೀಟ್ ಪ್ರಕಾರ, ವೈದ್ಯರ ಹೆಸರು ರಜನೀಶ್ ಗಾಲ್ವಾ. ಬೀದಿನಾಯಿ ತನ್ನ ಮನೆಯ ಬಳಿ ಓಡಾಡುತ್ತಿದ್ದನ್ನು ತಪ್ಪಿಸಲು ಹೀಗೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಉಲ್ಲೇಖಿಸಿವೆ.

BIGG NEWS : ಕರ್ನಾಟಕವು `RSS’ ಪ್ರಯೋಗಾಲಯವಾಗಿ ಮಾರ್ಪಟ್ಟಿದೆ : ಕೇರಳ ಸಿಎಂ ಪಿಣರಾಯಿ ವಿಜಯನ್

BIG NEWS: ಇಂದು ಬ್ರಿಟನ್‌ ರಾಣಿ ʻಎಲಿಜಬೆತ್‌ IIʼ ಅಂತ್ಯಕ್ರಿಯೆ… ಪತಿ ಫಿಲಪ್‌ ಪಕ್ಕದಲ್ಲೇ ಸಮಾಧಿ | Funeral of Queen Elizabeth II

ದೂರು ನೀಡಿಲು ಹೋದ ವ್ಯಕ್ತಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ… Video Viral

Share.
Exit mobile version