ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾಜಿಕ ಜಾಲತಾಣಗಳು ಬಂದ ಬಳಿಕ  ವಿಷಯಗಳು ಕ್ಷಣ ಮಾತ್ರದಲ್ಲಿ ಎಲ್ಲಡೆ ಹರಡುತ್ತದೆ. ಒಮೊಮ್ಮೆ ಸೋಶಿಯಲ್ ಮಿಡಿಯಾದಲ್ಲಿ ಕಂಡು ಬರುವ ವಿಡಿಯೋಗಳು ಮುಖದಲ್ಲಿ ನಗು ಮೂಡಿಸುವುದು ಖಂಡಿತ. ಅಂತಹದ್ದೆ ವಿಡಿಯೋವೊಂದು ವೈರಲ್ ಆಗ್ತಿದೆ.  

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಎರಡು ಜಿಂಕೆಗಳು ಪರಸ್ಪರ ಜಗಳವಾಡುತ್ತಿರುವುದನ್ನು ಕಾಣಬಹುದು. ಇಬ್ಬರೂ ಹಿಂಗಾಲುಗಳ ಮೇಲೆ ನಿಂತು ಕ್ಯೂಟ್ ಆಗಿ ಜಗಳವಾಡುತ್ತಿರುವುದು ವೀಕ್ಷಕರ ಮೊಗದಲ್ಲಿ ನಗುವನ್ನು ಮೂಡಿಸದೆ ಇರದು.

ಈ ವಿಡಿಯೋವನ್ನು ಭಾರತೀಯ ಅರಣ್ಯ ಅಧಿಕಾರಿ ಸುಸಂತ ನಂದಾ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೋ 80 ಸಾವಿರ ವೀಕ್ಷಣೆ ಪಡೆದಿದೆ. ನೆಟ್ಟಿಗರು ವಿವಿಧ ಬಗೆಯ  ಇಮೋಜಿಗಳನ್ನು ನೀಡುವ ಮೂಲಕ ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ.

Share.
Exit mobile version