ಶಿವಮೊಗ್ಗ: ಇಂದು ಲೋಕಸಭಾ ಚುನಾವಣೆಗೆ 1ನೇ ಹಂತದಲ್ಲಿ ಜಿಲ್ಲೆಯಲ್ಲಿ ಮತದಾನ ನಡೆಯುತ್ತಿದೆ. ಮತಗಟ್ಟೆ ಒಳಗೆ ಚುನಾವಣಾ ಆಯೋಗವು ಮೊಬೈಲ್ ತೆಗೆದುಕೊಂಡು ಹೋಗೋದಕ್ಕೆ ನಿರ್ಬಂಧ ವಿಧಿಸಿತ್ತು. ಮತದಾನದ ವೀಡಿಯೋ, ಪೋಟೋ ತೆಗೆದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿಯೂ ಎಚ್ಚರಿಕೆ ನೀಡಿತ್ತು. ಈ ನಿರ್ಬಂಧದ ನಡುವೆಯೂ ಶಿವಮೊಗ್ಗ ಜಿಲ್ಲೆಯಲ್ಲಿ ಕಿಡಿಗೇಡಿಯೊಬ್ಬ ಮತದಾನದ ವೀಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ದಾನೆ. ಆ ವೀಡಿಯೋ ವೈರಲ್ ಕೂಡ ಆಗಿದೆ.

ಹೌದು ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ನಡೆಯುತ್ತಿರುವಂತ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದ ವೇಳೆಯಲ್ಲಿ ಕಿಡಿಗೇಡಿಗಳು ಮತದಾನ ಮಾಡಿದಂತ ವೀಡಿಯೋ ಮಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿದ್ದಾರೆ. ಈಗ ಎರಡು ಮತದಾನ ಮಾಡಿದಂತ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ವೈರಲ್ ಆಗಿರುವಂತ ಒಂದು ವೀಡಿಯೋ ಭದ್ರಾವತಿಯ ಮತಗಟ್ಟೆಯೊಂದರದ್ದು ಎನ್ನಲಾಗುತ್ತಿದೆ. ವಿವಿಪ್ಯಾಟ್ ನಲ್ಲಿ ಯಾರಿಗೆ ವೋಟು ಹಾಕಲಾಗಿದೆ ಎಂಬುದನ್ನು ವೀಡಿಯೋ ಮಾಡಿಕೊಳ್ಳಲಾಗಿದೆ. ಅಲ್ಲದೇ ಇವಿಎಂ ಮೆಷಿನ್ ನಲ್ಲಿ ಬಟನ್ ಒತ್ತಿ ಬಳಿಕ ರೆಡ್ ಲೈಟ್ ಕೂಡ ಆನ್ ಆಗೋದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನೂ ಮತ್ತೊಂದು ವೀಡಿಯೋ ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ ಯಾರೋ ಒಬ್ಬ ಅಭ್ಯರ್ಥಿಗೆ ವೋಟ್ ಹಾಕುವಂತೆ ಕೈಯನ್ನು ತೆಗೆದುಕೊಂಡು ಹೋಗಿ, ಆನಂತ್ರ ಅಸಭ್ಯವಾಗಿ ಬೆರಳು ತೋರಿಸಿ ಮತ್ತೊಬ್ಬ ಅಭ್ಯರ್ಥಿಗೆ ವೋಟ್ ಹಾಕೋ ದೃಶ್ಯವನ್ನು ಕಾಣಬಹುದಾಗಿದೆ. ಈ ಬಗ್ಗೆ ಚುನಾವಣಾ ಆಯೋಗವು ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜ್ವಲ್ ‘ಪೆನ್ ಡ್ರೈವ್’ ಕೇಸಲ್ಲಿ ಹಾಸನ ಮಾಜಿ ಶಾಸಕನ ಕೈವಾಡವಿದೆ : ಶಾಸಕ ರವಿಗಣಿಗ ಗಂಭೀರ ಆರೋಪ

ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿಗೆ ಮತದಾನಕ್ಕೆ ಅನುಮತಿ ನೀಡಿದ ಹೈಕೋರ್ಟ್

Share.
Exit mobile version