ಮಹಾರಾಷ್ಟ್ರ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಮುಂಬೈನ ಅವರ ನಂದನವನ ಬಂಗಲೆಯಲ್ಲಿ ಬಾಲಕಿಯ ನಡುವಿನ ಸಂವಾದದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ.

ವೀಡಿಯೋದಲ್ಲಿರುವ ಅನ್ನದಾ ದಾಮ್ರೆ ಎಂಬ ಬಾಲಕಿ, ʻಅಸ್ಸಾಂನಲ್ಲಿ ಪ್ರವಾಹ ಉಂಟಾದಾಗ ನೀವು ಜನರಿಗೆ ಸಹಾಯ ಮಾಡಲು ನೀರಿನಲ್ಲಿ ಅಲೆದಾಡಿದ್ದೀರಿ. ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡುವ ಮೂಲಕ ನಾನು ಮುಖ್ಯಮಂತ್ರಿಯಾಗಬಹುದೇ?ʼ ಎಂದು ಪ್ರಶ್ನಿಸಿದ್ದಾಳೆ.

ಇದಕ್ಕೆ ಉತ್ತರಿಸಿದ ಏಕನಾಥ್ ಶಿಂಧೆ, “ಹೌದು, ನೀವು ಖಂಡಿತವಾಗಿ ಮುಖ್ಯಮಂತ್ರಿಯಾಗಬಹುದು. ನಾವು ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸುತ್ತೇವೆ” ಎಂದು ಹಾಸ್ಯ ಚಟಾಕಿ ಹಾರಿಸಿದರು.

ಅನ್ನದಾ ನಂತರ, ಶಿಂಧೆ ಅವರನ್ನು ಈ ವರ್ಷದ ದೀಪಾವಳಿಯ ಸಮಯದಲ್ಲಿ ಗುವಾಹಟಿಗೆ ಕರೆದೊಯ್ಯುವುದಾಗಿ ಭರವಸೆ ನೀಡುವಂತೆ ಕೇಳಿಕೊಂಡರು. “ಖಂಡಿತ, ನಾವು ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ. ನೀವು ಗುವಾಹಟಿಯಲ್ಲಿರುವ ಕಾಮಖಯಾ ದೇವಸ್ಥಾನಕ್ಕೆ ಭೇಟಿ ನೀಡಬೇಕೆ? ಎಂದು ಶಿಂಧೆ ಕೇಳಿದಕ್ಕೆ, ಅನ್ನದಾ ಹೌದು ಎಂದಿದ್ದಾಳೆ.

Good News : ರಾಜ್ಯದ ಜನತೆಗೆ ಗುಡ್ ನ್ಯೂಸ್ : ‘ನಂದಿನಿ ಉತ್ಪನ್ನ’ಗಳ ದರ ಇಳಿಕೆ | Nandini Product Price

ಮಾರಾಟದ ವೇಳೆ ತನ್ನನ್ನು ಸಾಕಿ ಸಲಹಿದ ಮಾಲೀಕನನ್ನು ಅಪ್ಪಿ ಮೇಕೆ ಗೋಳಾಟ.. ಹೃದಯಸ್ಪರ್ಶಿ Video Viral

Share.
Exit mobile version