ನವದೆಹಲಿ: ಜನರ ಗುಂಪೊಂದು ಠಾಣೆಗೆ ನುಗ್ಗಿ ಪೊಲೀಸ್ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾ ಥಳಿಸಿರುವ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನವದೆಹಲಿಯ ಆನಂದ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ವೀಡಿಯೋದಲ್ಲಿ 10-12 ಜನರ ಗುಂಪೊಂದು ಪೊಲೀಸ್ ಠಾಣೆಗೆ ನುಗ್ಗಿದ್ದಲ್ಲದೇ, ಅಲ್ಲಿದ್ದ ಹೆಡ್‌ಕಾನ್‌ಸ್ಟೆಬಲೊಬ್ಬರನ್ನು ಮನಬಂದಂತೆ ಥಳಿಸಿದ್ದಾರೆ. ಆದ್ರೆ, ಈ ವೇಳೆ ಯಾರೂ ಕೂಡ ಅವರನ್ನು ತಡೆಯಲು ಮುಂದಾಗಿಲ್ಲ. ಘಟನೆಯ ವಿಡಿಯೋವನ್ನು ಅಲ್ಲಿದ್ದ ಬೇರೆ ಪೊಲೀಸ್‌ ಸಿಬ್ಬಂದಿಗಳು ಚಿತ್ರೀಕರಿಸಿದ್ದಾರೆ.

ಪೊಲೀಸರಿಗೆ ಏಕೆ ಥಳಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆ ಆಗಸ್ಟ್ 3 ರಂದು ನಡೆದಿದೆ. ಆರೋಪಿಗಳನ್ನು ಪತ್ತೆಹಚ್ಚಲಾಗುತ್ತಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌: ಪುರುಷರ 67 ಕೆಜಿ ವೆಲ್ಟರ್‌ವೇಟ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ʻರೋಹಿತ್ ಟೋಕಾಸ್ʼ| Rohit Tokas wins bronze

BREAKING NEWS: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ಯ 10 ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಿಸಿ ಸರ್ಕಾರ ಆದೇಶ: ಹೀಗಿದೆ ಪಟ್ಟಿ

ಕಾಮನ್‌ವೆಲ್ತ್ ಗೇಮ್ಸ್‌: ಪುರುಷರ 67 ಕೆಜಿ ವೆಲ್ಟರ್‌ವೇಟ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ʻರೋಹಿತ್ ಟೋಕಾಸ್ʼ| Rohit Tokas wins bronze

Share.
Exit mobile version