ಬೋಸ್ಟನ್ (ಅಮೆರಿಕ): ಅಮೆರಿಕದ ಬೋಸ್ಟನ್‌ನ ಹೊರವಲಯದಲ್ಲಿರುವ ಸೇತುವೆಯೊಂದರಲ್ಲಿ ಇಂದು ಸುರಂಗಮಾರ್ಗ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ತುರ್ತು ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು.

ಸುಮಾರು 200 ಜನರನ್ನು ರೈಲಿನಿಂದ ಹೊರಕ್ಕೆ ಸ್ಥಳಾಂತರಿಸಲಾಯಿತು. ಹೆಚ್ಚಿನವರು ರೈಲಿನ ಕಿಟಕಿಗಳ ಮೂಲಕ ಹೊರ ಬಂದಿದ್ದಾರೆ. ಒಬ್ಬ ಮಹಿಳೆ ಮಾತ್ರ ಕೆಳಗಿನ ಮಿಸ್ಟಿಕ್ ನದಿಗೆ ಹಾರಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತಪಾಸಣೆಯ ನಂತರ, ವಾಹನದ ಮೇಲಿನ ಶೀಟ್ ಮೆಟಲ್ ಅಥವಾ ಸೈಡ್ ಪ್ಯಾನೆಲ್‌ನ ಒಂದು ಭಾಗವು ಮೂರನೇ ಹಳಿಯೊಂದಿಗೆ ಸಂಪರ್ಕಕ್ಕೆ ಬಂದಂತೆ ಕಂಡುಬಂದಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾಸಚೂಸೆಟ್ಸ್ ಬೇ ಸಾರಿಗೆ ಪ್ರಾಧಿಕಾರ (MBTA) ಹೇಳಿಕೆ ಪ್ರಕಾರ, “ಇಂದು ಬೆಳಿಗ್ಗೆ, ಆರೆಂಜ್ ಲೈನ್ ರೈಲು ವೆಲ್ಲಿಂಗ್ಟನ್ ಮತ್ತು ಅಸೆಂಬ್ಲಿ ನಿಲ್ದಾಣದ ನಡುವಿನ ಸೇತುವೆಯ ಮೂಲಕ ಪ್ರಯಾಣಿಸುತ್ತಿದ್ದಾಗ ಅದರ ಮೇಲೆ ಜ್ವಾಲೆ ಕಾಣಿಸಿಕೊಂಡಿದೆ” ಎಂದು ತಿಳಿಸಿದೆ.

ಜನರು ತಮ್ಮನ್ನು ರಕ್ಷಿಸಿಕೊಳ್ಳಲು ರೈಲಿನ ಕಿಟಕಿಗಳಿಂದ ಜಿಗಿದ ವರದಿಗಳು ಮತ್ತು ವೀಡಿಯೊಗಳು ಟ್ವಿಟರ್‌ನಲ್ಲಿ ಕಾಣಿಸಿಕೊಂಡಿವೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.

Shocking news : ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಕರು ಕಡಿಮೆಯಾಗಿದ್ದಕ್ಕೆ ಹೈದರಾಬಾದ್​ನಲ್ಲಿ ಟೆಕ್​ ವಿದ್ಯಾರ್ಥಿ ಆತ್ಮಹತ್ಯೆ!

BREAKING NEWS: ಬೆಳಗಾವಿಯಲ್ಲಿ ಪ್ರೇಯಸಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

Share.
Exit mobile version