2024ರ ಪ್ಯಾರಿಸ್​ ಒಲಿಂಪಿಕ್​ ಗೇಮ್ಸ್​​ ನ ನೇರಪ್ರಸಾರದ ಹಕ್ಕು ಪಡೆದ ವಯಾಕಾಮ್18 ಮೀಡಿಯಾ

ಮುಂಬೈ: 2024ರ ಪ್ಯಾರಿಸ್​ಒಲಿಂಪಿಕ್​ಗೇಮ್ಸ್​​ನ ನೇರಪ್ರಸಾರದ ಎಕ್ಸ್​ಕ್ಲೂಸಿವ್​ಮಾಧ್ಯಮ ಹಕ್ಕನ್ನು ವಯಾಕಾಮ್​18 ಮೀಡಿಯಾ ಪ್ರೈವೆಟ್​ಲಿಮಿಟೆಡ್(ವಯಾಕಾಮ್18) ಪಡೆದುಕೊಂಡಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಇಂದು ಘೋಷಿಸಿದೆ. ಇದರೊಂದಿಗೆ 2024ರಲ್ಲಿ ಭಾರತ, ಬಾಂಗ್ಲಾದೇಶ, ಭೂತಾನ್​, ಮಾಲ್ಡೀವ್ಸ್​, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಚಳಿಗಾಲದ ಯೂತ್​ಒಲಿಂಪಿಕ್​ಗೇಮ್ಸ್​ಗ್ಯಾಂಗ್ವನ್​ನ ನಾನ್​-ಎಕ್ಸ್​​ಕ್ಲೂಸಿವ್​ಹಕ್ಕನ್ನೂ ವಯಾಕಾಮ್​18ಗೆ ನೀಡಲಾಗಿದೆ. ಈ ಒಪ್ಪಂದದ ಪ್ರಕಾರ ವಯಾಕಾಮ್​18, ಗೇಮ್ಸ್​ನ ಬಹು–ಫ್ಲ್ಯಾಟ್​ಫಾರ್ಮ್​ಕವರೇಜ್​ಮತ್ತು ಫ್ರೀ–ಟು–ಏರ್​ಟಿವಿ ಕವರೇಜ್​ಗಳನ್ನು ಭಾರತ ಮತ್ತು ಉಪಖಂಡದಲ್ಲಿ ನೀಡಲಿದೆ. BREAKIN NEWS : ಚೀನಾದಲ್ಲಿ ಕೋವಿಡ್ ಹೆಚ್ಚಾಗಲು ಕಾರಣವಾದ BF.7 ಶಂಕಿತ ಪ್ರಕರಣ ಗುಜರಾತಿನಲ್ಲಿ ಪತ್ತೆ | BF.7 variant found in Gujarat ‘ವಯಾಕಾಮ್​18 ಜತೆಗಿನ ನಮ್ಮ ಪಾಲುದಾರಿಕೆಯಿಂದ ಒಲಿಂಪಿಕ್​ಗೇಮ್ಸ್​​ನ ಮ್ಯಾಜಿಕ್ ಅನ್ನು ಭಾರತ ಮತ್ತು ಉಪಖಂಡದ ಕ್ರೀಡಾಭಿಮಾನಿಗಳು ಆನಂದಿಸಬಹುದಾಗಿದೆ‘ ಎಂದು ಐಒಸಿ ಅಧ್ಯಕ್ಷ ಥಾಮಸ್​ಬಾಚ್​ಹೇಳಿದ್ದಾರೆ. ‘ಕ್ರಿಯಾತ್ಮಕ ಕ್ರೀಡೆಗಳು ಮತ್ತು ಮಾಧ್ಯಮ ಮಾರುಕಟ್ಟೆಯಾಗಿ ಇದು ಒಲಿಂಪಿಕ್ ಪ್ರಸಾರಕ್ಕೆ ಪ್ರಮುಖವಾದ ಕಾರ್ಯತಂತ್ರದ ಪ್ರದೇಶವಾಗಿದೆ ಮತ್ತು ಈ ಹೊಸ ಮಾಧ್ಯಮ ಹಕ್ಕುಗಳ ಒಪ್ಪಂದವು ಈ ದೇಶಗಳಾದ್ಯಂತ ಅಭಿಮಾಗಳು ಮತ್ತು ಯುವಜನರನ್ನು ಒಲಿಂಪಿಕ್​ಕ್ರೀಡೆಗಳು ಮತ್ತು ಒಲಿಂಪಿಕ್​ಮೌಲ್ಯಗಳೊಂದಿಗೆ ತೊಡಗಿಸಿಕೊಳ್ಳಲು ನಮಗೆ ಸ್ಫೂರ್ತಿ ತುಂಬುತ್ತದೆ‘ ಎಂದು ಬಾಚ್​ವಿವರಿಸಿದ್ದಾರೆ. ‘ಒಲಿಂಪಿಕ್ ಆಂದೋಲನವು ಭಾರತದಲ್ಲಿ ಬಲಿಷ್ಠವಾಗುತ್ತಿದೆ. ಭಾರತೀಯ ಕ್ರೀಡಾಪಟುಗಳ ಪದಕ ವಿಜೇತ ನಿರ್ವಹಣೆಗಳು ಮತ್ತು ಅವರ ಸ್ಫೂರ್ತಿದಾಯಕ ಕಥೆಗಳು, ಬೆಳೆಯುತ್ತಿರುವ ಕ್ರೀಡಾ ಸಂಸ್ಕೃತಿ ಮತ್ತು ಅವರಿಗೆ ಲಭಿಸುತ್ತಿರುವ ಉನ್ನತ ಮಟ್ಟದ ಅವಕಾಶಗಳನ್ನು ಕೋಟ್ಯಂತರ ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ತಲುಪಿಸಲಾಗುತ್ತದೆ. ನಮ್ಮ ಹಲವು ಫ್ಲಾಟ್​ಫಾರ್ಮ್​ಗಳ ಮೂಲಕ ಪ್ರತಿಯೊಬ್ಬ ಮತ್ತು ಎಲ್ಲ ಭಾರತೀಯರಿಗೂ ಒಲಿಂಪಿಕ್​ಸಾಧನೆಗಳನ್ನು ನೇರಪ್ರಸಾರದ ಮೂಲಕ ಪ್ರಸ್ತುತಪಡಿಸಲು ನಾವು ಸಂತೋಷ ಪಡುತ್ತೇವೆ. 2024ರ ಪ್ಯಾರಿಸ್ ಗೇಮ್ಸ್​ನಲ್ಲಿ ಕ್ರೀಡಾ ವೈಭವದ ಉತ್ತುಂಗವನ್ನು ಸಾಧಿಸಲು ಎಲ್ಲ ಕ್ರೀಡಾಪಟುಗಳು ಕೈಗೊಳ್ಳುವ ಕ್ರೀಡಾ ಶ್ರೇಷ್ಠತೆಯ ಅನ್ವೇಷಣೆಯನ್ನು ಪ್ರದರ್ಶಿಸಲು ನಾವು ಹೆಮ್ಮೆ ಪಡುತ್ತೇವೆ‘ ಎಂದು ವಯಾಕಾಮ್​18 ಸ್ಪೋರ್ಟ್ಸ್​​ಸಿಇಒ ಅನಿಲ್​ಜಯರಾಜ್​ಹೇಳಿದ್ದಾರೆ. ಶಿವಮೊಗ್ಗ: ಜ.14, 15ರಂದು ‘ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಚೌಡೇಶ್ವರಿ ದೇವಿ’ಯ ‘ಜಾತ್ರಾ ಮಹೋತ್ಸವ’ | Sigandur Chowdeshwari Temple ಒಲಿಂಪಿಕ್ ಗೇಮ್ಸ್ನ ಮ್ಯಾಜಿಕ್ನ ಅನುಭವ ಪಡೆಯಲು ಜಗತ್ತಿನಾದ್ಯಂತ ಹೆಚ್ಚಿನ ಸಂಖ್ಯೆಯ ಜನರಿಗೆ ಸಾಧ್ಯವಾಗಬೇಕೆಂದು ಐಒಸಿ ಜಗತ್ತಿನಾದ್ಯಂತ ಮಾಧ್ಯಮ ಕಂಪನಿಗಳೊಂದಿಗೆ ಕೆಲಸ ಮಾಡುತ್ತದೆ. ಒಲಿಂಪಿಕ್ ಮಾಧ್ಯಮ ಪಾಲುದಾರಿಕೆಯಿಂದ ಅಮೂಲ್ಯವಾದ ಆದಾಯವೂ ಸಂಪಾದನೆಯಾಗುತ್ತದೆ ಮತ್ತು ಇದು ಒಲಿಂಪಿಕ್​ಆಂದೋಲನಕ್ಕೆ ದೀರ್ಘಕಾಲಿಕ ಭದ್ರತೆಗಾಗಿ ಹೆಚ್ಚಿನ ಬಲವನ್ನೂ ತುಂಬುತ್ತದೆ. ಈ ಆದಾಯದಲ್ಲಿ ಐಒಸಿ ಕೇವಲ ಶೇ. 10 ಮಾತ್ರ ತನ್ನಲ್ಲಿ ಉಳಿಸಿಕೊಳ್ಳುತ್ತದೆ. ಉಳಿದ ಮೊತ್ತಗಳು ಒಲಿಂಪಿಕ್​ಗೇಮ್ಸ್ ಆಯೋಜನೆ, ವಿಶ್ವದೆಲ್ಲೆಡೆ ಕ್ರೀಡಾ ಅಭಿವೃದ್ಧಿ, ಒಲಿಂಪಿಕ್​ಆಂದೋಲನಕ್ಕೆ ವಿನಿಯೋಗವಾಗುತ್ತವೆ. ಒಲಿಂಪಿಕ್​ಅಜೆಂಡಾ 2020 ಮತ್ತು ಒಲಿಂಪಿಕ್​ಅಜೆಂಡಾ 2020+5 ಅನುಷ್ಠಾನಕ್ಕೂ ನೆರವಾಗುತ್ತದೆ.