ಚಾಮರಾಜನಗರ: ತಾಲೂಕಿನ ಚೆನ್ನಪ್ಪನಪುರದಲ್ಲಿ ಇಂದು ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತಿತ್ತು. ಈ ವೇಳೆ ರಥೋತ್ಸವ ಮುರಿದು ಬಿದ್ದಿರುವ ಘಟನೆ ನಡೆದಿದೆ.

BREAKING NEWS: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್‌ ಗೆ ಮತ್ತೊಂದು ಟ್ವಿಸ್ಟ್:‌ ಮೊಬೈಲ್‌ ವಿಚಾರಣೆ ವೇಳೆ ಆರೋಪಿಗಳ ಕಳ್ಳಾಟ ಬಯಲು

 

ಕೆಲವೇ ಕ್ಷಣಗಳಲ್ಲಿ ನಡೆದು ಹೋದ ಅನಾಹುತದಿಂದ ವೀರಭದ್ರೇಶ್ವರ ಸ್ವಾಮಿಯ ಭಕ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ವೀರಭದ್ರೇಶ್ವರ ರಥೋತ್ಸವ ನಡೆಯುತ್ತಿದ್ದ ವೇಳೆಯಲ್ಲಿ ಭಕ್ತರು ತೇರು ಎಳೆಯುತ್ತಿದ್ದಾಗ ಮೊದಲು ಚಕ್ರ ಮುರಿಯಿತು. ನಂತರ ರಥದ ಮೇಲ್ಭಾಗವು ಉರುಳಿತು. ತುಸು ಹೆಚ್ಚುಕಡಿಮೆಯಾಗಿದ್ದರೂ ನೂರಾರು ಜನರ ಜೀವ ಹೋಗುತ್ತಿತ್ತು. ಅದೃಷ್ಟವಶಾತ್ ಭಕ್ತರು ಅಪಾಯದಿಂದ ಪಾರಾಗಿದ್ದಾರೆ.

BREAKING NEWS: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್‌ ಗೆ ಮತ್ತೊಂದು ಟ್ವಿಸ್ಟ್:‌ ಮೊಬೈಲ್‌ ವಿಚಾರಣೆ ವೇಳೆ ಆರೋಪಿಗಳ ಕಳ್ಳಾಟ ಬಯಲು

 

ಕೊವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ಹೀಗಾಗಿಯೇ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ನಿಗದಿಯಂತೆ ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಆರಂಭವಾಯಿತು. ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ದೇಗುಲ ಆವರಣದಲ್ಲಿ ರಥೋತ್ಸವ ಎಳೆಯಲಾಗಿತ್ತು. ಈ ವೇಳೆ ಅಚಾನಕ್ ಆಗಿ ಕಲ್ಲಿನ ಮೇಲೆ ಹತ್ತಿದಾಗ ಸಮತೋಲನ ಏರುಪೇರಾಯಿತು. ಚಕ್ರವು ಮುರಿದಿದಿದ್ದರಿಂದ ರಥವು ಉರುಳಿತು.

Share.
Exit mobile version