ಸುಭಾಷಿತ :

Monday, February 24 , 2020 1:36 AM

ವಾಸ್ತು ಶಾಸ್ತ್ರ ಹೇಳುತ್ತೆ… ಮನೆಯಲ್ಲಿ ಈ ವಸ್ತುಗಳನ್ನು ಇಡಬಾರದಂತೆ…


Tuesday, November 5th, 2019 11:12 am

ಸ್ಪೆಷಲ್ ಡೆಸ್ಕ್ : ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳ ಬಗ್ಗೆ ಅವುಗಳ ಉಪಯೋಗ, ಮನೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಸಿವೆ. ಅಂತಹ ಯಾವ ವಸ್ತುಗಳನ್ನು ಮನೆಯಲ್ಲಿ ಇಡೋದರಿಂದ ಮನೆಯಲ್ಲಿ ಜಗಳ ಅಶಾಂತಿ ಉಂಟಾಗುತ್ತದೆ ನೋಡಿ…

ಮನೆಯಲ್ಲಿ ಕನ್ನಡಿ ಅಥವಾ ಕಿಟಕಿಯ ಗಾಜು ತುಂಡಾಗಿದ್ದರೆ ಅದನ್ನು ಬೇಗನೆ ಬದಲಾಯಿಸಿ. ತುಂಡಾದ ಕನ್ನಡಿಯಿಂದ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.
ಸ್ಮಶಾನ ಕಾಳಿಯನ್ನು ಮನೆಯಲ್ಲಿ ಇಡಬಾರದು , ಸ್ಮಶಾನ ಕಾಳಿ ಎಂದರೆ ದೇವಿಯ ಎಡ ಕಾಲು ಭಗವಾನ್‌ ಶಿವನ ಮೇಲೆ ಕಾಲಿರುತ್ತದೆ ಇದು ಉತ್ತಮ ಅಲ್ಲ.
ಇನ್ನು ಹಾಳಾದ ಗಡಿಯಾರವನ್ನು ಮನೆಯಲ್ಲಿ ತಪ್ಪಿಯೂ ಇಡಬೇಡಿ. ಇದರಿಂದ ಮನೆಯಲ್ಲಿ ಪ್ರಗತಿ ಉಂಟಾಗುವುದಿಲ್ಲ. ನಿಂತು ಹೋದ ಗಂಟೆಯಂತೆ ಮನೆಯವರ ಜೀವನವೂ ನಿಂತು ಹೋಗುತ್ತದೆ.
ಮನೆಯಲ್ಲಿ ತುಂಡಾದ ದೇವರ ವಿಗ್ರಹ ಅಥವಾ ಹಳೆಯದಾದ ಫೋಟೊ ಇಡಬೇಡಿ. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.
ಶಿವಲಿಂಗದ ಪೂಜೆ ಮಂದಿರದಲ್ಲಿ ಮಾಡಿದರೆ ಉತ್ತಮ, ಆದರೆ ಇದನ್ನು ಮನೆಯಲ್ಲಿ ಮಾಡುವುದು ವಾಸ್ತುವಿನ ದೃಷ್ಟಿಯಿಂದ ಉತ್ತಮವಲ್ಲ.
ತುಂಡಾದ ಪಾತ್ರೆ ಹಾಗೂ ಹಾಳಾದ ಎಲೆಕ್ಟ್ರಾನಿಕ್‌ ಸಾಮಾಗ್ರಿಗಳನ್ನು ಮನೆಯಲ್ಲಿ ಇಡಬೇಡಿ. ಇದು ಸಹ ಮನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಮನೆಯಲ್ಲಿ ಅಶಾಂತಿ ನೆಲೆಸುವಂತೆ ಮಾಡುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions