ಸುಭಾಷಿತ :

Monday, March 30 , 2020 1:17 AM

ಪ್ರತಿಯೊಂದು ಮನೆಗೂ ಕಿಟಕಿ ಬೇಕು…ಅದು ವಾಸ್ತು ನಿಯಮದ ಪ್ರಕಾರ ಇದ್ದರೆ ಚೆಂದ


Friday, February 21st, 2020 12:30 pm

ಸ್ಪೆಷಲ್ ಡೆಸ್ಕ್ : ಪ್ರತಿಯೊಂದು ಮನೆಗಳಲ್ಲೂ ಕಿಟಕಿ ಇರಲೇಬೇಕು. ವಾಸ್ತು ಶಾಸ್ತ್ರದ ಪ್ರಕಾರ ಇದು ತುಂಬಾನೆ ಮುಖ್ಯ. ಯಾಕೆಂದರೆ ಇದು ಬೆಳಕನ್ನು ಮನೆಯ ಒಳಗೆ ಹರಿಸುವುದು ಮಾತ್ರವಲ್ಲ, ಮನೆಯಲ್ಲಿನ ನೆಗೆಟಿವ್ ಎನರ್ಜಿ ಕೂಡ ಕಿಟಕಿಯಿಂದಲೇ ಹೊರ ಬರುತ್ತದೆ. ಜೊತೆಗೆ ಪಾಸಿಟಿವ್ ಎನರ್ಜಿ ಮನೆಯೊಳಗೇ ಪ್ರವೇಶ ಮಾಡುತ್ತದೆ.

ಕಿಟಕಿ ನಿರ್ಮಾಣದ ಸಮಯದಲ್ಲಿ ಈ ವಾಸ್ತು ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು….
ಕಿಟಕಿಯನ್ನು ತೆರೆಯುವಾಗ ಮತ್ತು ಮುಚ್ಚುವಾಗ ಶಬ್ಧವಾಗಬಾರದು.ಶಬ್ಧದಿಂದ ಮನೆಯ ಸುಖ ಶಾಂತಿ ಹಾಳಾಗುತ್ತದೆ.
ಮನೆಯಲ್ಲಿ ಕಿಟಕಿಗಳ ಸಂಖ್ಯೆ ಸಮ ಸಂಖ್ಯೆಯಲ್ಲಿ ಇರಬೇಕು. ಅಂದರೆ ೨, ೪, ೬ ಇತ್ಯಾದಿ.
ಕಿಟಕಿಯ ಗಾತ್ರ ಬಾಗಿಲಿನ ಅನುಪಾತದಲ್ಲಿಯೇ ಇರಬೇಕು. ಅದಕ್ಕಿಂತ ಹೆಚ್ಚು ಕಡಿಮೆ ಇರಬಾರದು.
ಮನೆಯ ಒಂದು ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚು ಕಿಟಕಿ ಇಡಬಾರದು.
ಮನೆಯ ಪೂರ್ವ ದಿಕ್ಕಿನಲ್ಲಿ ಕಿಟಕಿ ಇರಲಿ. ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಮನೆಯ ಒಳಗೆ ಬರಲು ಸಾಧ್ಯವಾಗುತ್ತದೆ. ಇದರಿಂದ ಪೊಸಿಟಿವ್ ಎನರ್ಜಿ ಮನೆ ತುಂಬುತ್ತದೆ.
ಸಮಯಕ್ಕೆ ಸರಿಯಾಗಿ ಕಿಟಕಿಯ ರಿಪೇರಿ ಹಾಗೂ ಬಣ್ಣ ಬದಲಾವಣೆ ಮಾಡಲು ಮರೆಯಬೇಡಿ. ಇಲ್ಲವಾದರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions