ಸುಭಾಷಿತ :

Wednesday, April 1 , 2020 1:43 AM

‘ಹಿಂದೂಗಳ ತಾಳ್ಮೆಯನ್ನೇ ದೌರ್ಬಲ್ಯ ಅಂದ್ಕೊಳ್ಬೇಡಿ’ : ವಾರಿಸ್ ಪಠಾಣ್ ಗೆ ಫಡಣವೀಸ್ ಎಚ್ಚರಿಕೆ


Friday, February 21st, 2020 8:56 pm

ನವದೆಹಲಿ : ದೇಶದಲ್ಲಿ ಮುಸ್ಲಿಂರು ಕೇವಲ 15 ಕೋಟಿ ಇರಬಹುದು ಆದರೆ, ಅವರು 100 ಕೋಟಿ ಜನರ ದೊಡ್ಡ ಸಮುದಾಯದ ಮೇಲೆ ಪ್ರಾಬಲ್ಯ ಮೆರೆಯಬಹುದು ವಿವಾದಾತ್ಮಕ ಹೇಳಿಕೆ ನೀಡಿದ್ದ ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಗೆ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ತಿರುಗೇಟು ನೀಡಿದ್ದಾರೆ.

ನಮ್ಮ ತಾಳ್ಮೆಯನ್ನೇ ದೌರ್ಬಲ್ಯ ಎಂದುಕೊಳ್ಳಬೇಡಿ, ಪಠಾಣ್ ಅವರ ಹೇಳಿಕೆಯನ್ನು ಖಂಡಿಸುತ್ತೇನೆ, ಫಠಾಣ್ ಅವರು ಈ ಕೂಡಲೇ ಕ್ಷಮೆ ಕೇಳಬೇಕು, ಉದ್ಧವ್ ಠಾಕ್ರೆ ಸರ್ಕಾರ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.

100 ಕೋಟಿ ಹಿಂದೂಗಳು ಇರುವುದರಿಂದಲೇ, ಈ ದೇಶದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆ ಹಾಗೂ ಸ್ವಾತಂರ್ತ್ಯವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಪಠಾಣ್ ಅರ್ಥ ಮಾಡಿಕೊಳ್ಳಬೇಕು, ಮುಸ್ಲಿಮರು ಬಹುಸಂಖ್ಯಾತರಿರುವ ದೇಶದಲ್ಲಿ ಈ ರೀತಿಯ ಹೇಳಿಕೆಯನ್ನು ನೀಡಲು ಯಾರಿಗೂ ಧೈರ್ಯವಿಲ್ಲ , ಹಿಂದೂಗಳಲ್ಲಿ ತಾಳ್ಮೆ ಇದೆ, ಆದರೆ ತಾಳ್ಮೆಯನ್ನೇ ದೌರ್ಬಲ್ಯ ಎಂದುಕೊಳ್ಳಬೇಡಿ ಎಂದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions