ಕೈ ಬೆರಳಿಗೆ ಚೆನ್ನಾಗಿ ನೇಲ್ ಪಾಲಿಶ್ ಹಾಕಿಕೊಳ್ಳುತ್ತಾರೆ ಆದರೆ ಅದು ಅರ್ಧ ಹೋದಾಗ ಮಾತ್ರ ಬೆರಳು ಚೆನ್ನಾಗಿ ಕಾಣುವುದಿಲ್ಲ. ಅದನ್ನು ತೆಗೆಯಲು ರಿಮೂವರ್ ಬಳಸೋದು ಸಾಮಾನ್ಯ. ಆದರೆ ರಿಮೂವರ್ ಇಲ್ಲದೆ  ಮನೆಯಲ್ಲಿರುವ ವಸ್ತುವನ್ನು ಬಳಸಿ ನೇಲ್ ಪಾಲಿಶ್ ಹೇಗೆ ತೆಗೆಯಬಹುದು ಎನ್ನುವುದನ್ನು ನೋಡೋಣ.

ನೇಲ್ ಪಾಲಿಶ್ ರಿಮೂವರ್ ಆಗಿ ಟೂತ್ಪೇಸ್ಟ್ ಬಳಸಬಹುದು.ಟೂತ್ಪೇಸ್ಟ್ ಬರೀ ಹಲ್ಲುಜ್ಜಲು ಮಾತ್ರ ಉಪಯೋಗಿಸಬೇಕೆಂದಿಲ್ಲ ನೇಲ್ ಪಾಲಿಶ್ ತೆಗೆಯಲು ಕೂಡ ಇದನ್ನು ಬಳಸಬಹುದು.ಈಥೈಲ್ ಅಸಿಟೇಟ್, ಟೂತ್ಪೇಸ್ಟ್ ನಲ್ಲಿ ಇರುತ್ತದೆ. ಇದು ಉಗುರುಗಳನ್ನು ಸ್ವಚ್ಛಗೊಳಿಸಲು ಕೂಡ ಸಹಕಾರಿ. ಉಗುರುಗಳನ್ನು ಸ್ವಚ್ಛಗೊಳಿಸಲು ಟೂತ್ಪೇಸ್ಟ್ ಮತ್ತು ಹಳೆಯ ಟೂತ್ ಬ್ರಷ್ ತೆಗೆದುಕೊಳ್ಳಬೇಕು ಉಗುರುಗಳ ಮೇಲೆ ಟೂತ್ಪೇಸ್ಟ್  ಹಚ್ಚಿಕೊಂಡು  ಬ್ರಷ್ ಅನ್ನು ಒದ್ದೆ ಮಾಡಿ ಉಗುರುಗಳ ಮೇಲೆ ಉಜ್ಜಬೇಕು ಇದರಿಂದ ನೇಲ್ ನಲ್ಲಿರುವ ನೇಲ್ ಪಾಲಿಷ್ ತೆಗೆಯಬಹುದು.

ನೇಲ್ ಪಾಲಿಶ್ ಬಣ್ಣ ತೆಗೆಯಲು ಹ್ಯಾಂಡ್ ಸ್ಯಾನಿಟೈಸರ್ ಕೂಡ ಬಳಸಬಹುದು. ಸ್ಯಾನಿಟೈಸರ್‌ನಲ್ಲಿ ರಬ್ಬಿಂಗ್ ಆಲ್ಕೋಹಾಲ್ ಇರುತ್ತದೆ. ಇದು ಉಗುರುಗಳನ್ನು ಸ್ವಚ್ಛಗೊಳಿಸಲು ತುಂಬಾ ಸಹಾಯ ಮಾಡುತ್ತದೆ. ಸ್ಯಾನಿಟೈಸರ್ ನಿಂದ ನೇಲ್ ಪಾಲಿಶ್ ತೆಗೆಯಲು ಮೊದಲು ಹತ್ತಿಯನ್ನು  ತೆಗೆದುಕೊಂಡು. ಅದರ ಮೇಲೆ ಸ್ಯಾನಿಟೈಸರ್ ಹಚ್ಚಿ ನಂತರ ಉಗುರಿಗೆ ಹಚ್ಚಿ ಉಜ್ಜಿ. ಇದನ್ನು 3 ರಿಂದ 4 ಬಾರಿ ಮಾಡಬೇಕು ಇದರಿಂದ ನೇಲ್ ನಲ್ಲಿರುವ ನೇಲ್ ಪಾಲಿಶ್ ಬಣ್ಣ ಹೋಗುತ್ತದೆ.

ಹೇರ್ ಸ್ಪ್ರೇ ಕೂಡ ನಿಮಗೆ ನೇಲ್ ಪಾಲಿಶ್ ರಿಮೂವರ್ ಆಗಿ ಬಳಕೆ ಮಾಡಬಹುದು. ಹೇರ್ ಸ್ಪ್ರೇನಲ್ಲಿ ರಬ್ಬಿಂಗ್ ಆಲ್ಕೋಹಾಲ್ ಇರುವುದರಿಂದ  ಇದು ನೇಲ್ ಪಾಲಿಶ್ ತೆಗೆದುಹಾಕಲು ಉತ್ತಮ ಪ್ರಯೋಜನಕಾರಿ ನೇಲ್ ಪಾಲಿಶ್ ತೆಗೆಯಲು ಮೊದಲು ಉಗುರಿನ ಮೇಲೆ ಹೇರ್ ಸ್ಪ್ರೇ ಅನ್ನು ಸಿಂಪಡಿಸಿಕೊಂಡು  ನಂತರ ಅದನ್ನು ಹತ್ತಿಯ ಸಹಾಯದಿಂದ  ಉಜ್ಜಿಕೊಳ್ಳಬೇಕು. ಸ್ವಲ್ಪ ಸಮಯದ ನಂತರ  ಉಗುರುಗಳನ್ನು ತೊಳೆಯಬೇಕು. ಇದರಿಂದ ಉಗುರಿನ ಮೇಲಿರುವ ನೇಲ್ ಪಾಲಿಶ್ ಹೋಗುತ್ತದೆ.

Share.
Exit mobile version