ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ ರಾಯಭಾರಿಗಳಾಗಿ ಉಸೇನ್ ಬೋಲ್ಟ್ ಮತ್ತು ಸನಾ ಮಿರ್ ನೇಮಿಸಲಾಗಿದೆ.

ಹೌದು, ಜಮೈಕಾದ ಸ್ಪ್ರಿಂಟಿಂಗ್ ದಂತಕಥೆ ಮತ್ತು ಎಂಟು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಅವರನ್ನ ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ ರಾಯಭಾರಿಯಾಗಿ ಬುಧವಾರ ನೇಮಿಸಲಾಗಿದೆ.

 

ಜೂನ್ 1 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಮಾರ್ಕ್ಯೂ ಈವೆಂಟ್ ಅನ್ನು ಉತ್ತೇಜಿಸುವಲ್ಲಿ ಲೆಜೆಂಡರಿ ಓಟಗಾರ ಪ್ರಮುಖ ಪಾತ್ರ ವಹಿಸಲಿದ್ದಾರೆ. ಬೋಲ್ಟ್ ಅವರ ನೇಮಕವನ್ನು ಹೊಸ ಪೀಳಿಗೆಯ ಅಭಿಮಾನಿಗಳನ್ನು ಕ್ರೀಡೆಗೆ ಆಕರ್ಷಿಸುವ ಕಾರ್ಯತಂತ್ರದ ಕ್ರಮವೆಂದು ನೋಡಲಾಗುತ್ತದೆ.

“ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್’ಗೆ ರಾಯಭಾರಿಯಾಗಲು ನಾನು ರೋಮಾಂಚನಗೊಂಡಿದ್ದೇನೆ” ಎಂದು ಬೋಲ್ಟ್ ಹೇಳಿದರು. “ಕ್ರಿಕೆಟ್ ಜೀವನದ ಒಂದು ಭಾಗವಾಗಿರುವ ಕೆರಿಬಿಯನ್ ನಿಂದ ಬಂದ ಈ ಕ್ರೀಡೆ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನ ಹೊಂದಿದೆ. ವಿಶ್ವಕಪ್’ನಲ್ಲಿ ವೆಸ್ಟ್ ಇಂಡೀಸ್ ಪಂದ್ಯಗಳಿಗೆ ಹಾಜರಾಗಲು ಮತ್ತು ಜಾಗತಿಕವಾಗಿ ಕ್ರಿಕೆಟ್ ಬೆಳವಣಿಗೆಗೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ.

 

“ಅಮೆರಿಕಕ್ಕೆ ಮೋದಿಯಂತಹ ನಾಯಕನ ಅಗತ್ಯವಿದೆ” : ‘ನಮೋ’ ಶ್ಲಾಘಿಸಿದ ‘ಜೆಪಿ ಮೋರ್ಗಾನ್ CEO’

BIG NEWS: ‘ಮದ್ಯಪ್ರಿಯ’ರೇ ಗಮನಿಸಿ: ಇಂದಿನಿಂದ 2 ದಿನ ಈ ಜಿಲ್ಲೆಗಳಲ್ಲಿ ‘ಎಣ್ಣೆ ಸಿಗಲ್ಲ’

BIG NEWS: ‘ಮದ್ಯಪ್ರಿಯ’ರೇ ಗಮನಿಸಿ: ಇಂದಿನಿಂದ 2 ದಿನ ಈ ಜಿಲ್ಲೆಗಳಲ್ಲಿ ‘ಎಣ್ಣೆ ಸಿಗಲ್ಲ’

Share.
Exit mobile version