ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್(US President Joe Biden) ಅವರಿಗೆ ಎರಡನೇ ಬಾರಿಗೆ ಕೊರೊನಾ ಪಾಸಿಟಿವ್(Covid Positive )ಬಂದಿದೆ. ಅವರು ಇದೀಗ ಪ್ರತ್ಯೇಕವಾಗಿದ್ದಾರೆ ಎಂದು ಶ್ವೇತಭವನದ ವೈದ್ಯರು ಶನಿವಾರ ತಿಳಿಸಿದ್ದಾರೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಮಾರ್ಗಸೂಚಿಗಳ ಅನುಸಾರವಾಗಿ, ಬೈಡನ್‌ ಅವರು ಐದು ದಿನಗಳವರೆಗೆ ಪ್ರತ್ಯೇಕವಾಗಿರಲಿದ್ದಾರೆ. ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬರುವವರೆಗೆ ವೈಟ್‌ ಹೌಸ್‌ನಲ್ಲಿ ಐಸೋಲಟ್‌ ಆಗಲಿದ್ದಾರೆ. ಅವರಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಅವರು ಚೆನ್ನಾಗಿಯೇ ಇದ್ದಾರೆ ಎಂದು ಶ್ವೇತಭವನದ ವೈದ್ಯ ಡಾ. ಕೆವಿನ್ ಒ’ಕಾನ್ನರ್ ಪತ್ರವೊಂದರಲ್ಲಿ ತಿಳಿಸಿದ್ದಾರೆ.

ಜುಲೈ 21 ರಂದು ಮೊದಲ ಬಾರಿಗೆ ಜೋ ಬೈಡೆನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ವೇಳೆ ಚಿಕಿತಸೆ ಪಡೆಯುವ ಮೂಲಕ ಗುಣಮುಖರಾಗಿದ್ದರು.

Video:‌ ಮಧ್ಯಪ್ರದೇಶದ ಕಾಲೇಜೊಂದರಲ್ಲಿ ಕಿರಿಯರ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಕಪಾಳಮೋಕ್ಷ ಮಾಡಿದ ಸೀನಿಯರ್ಸ್

Rain In Karnataka : ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ-ಆರೆಂಜ್ ಅಲರ್ಟ್’ ಘೋಷಣೆ

BIGG NEWS : ಆನಂದ್ ಸಿಂಗ್ ಗೆ ತವರು ಜಿಲ್ಲೆ ಉಸ್ತುವಾರಿ ನೀಡಿ ವಾಪಸ್ ಪಡೆದ ರಾಜ್ಯ ಸರ್ಕಾರ!

Share.
Exit mobile version