ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರಕೃತಿಯ ಪ್ರಕೋಪದಿಂದಾಗಿ ಟರ್ಕಿ ಮತ್ತು ಸಿರಿಯಾ ದೇಶಗಳು ಅಸ್ತವ್ಯಸ್ತವಾಗಿವೆ. ಈ ಎರಡು ದೇಶಗಳ ಗಡಿಯಲ್ಲಿ ಸೋಮವಾರ ಭಾರೀ ಭೂಕಂಪ ಸಂಭವಿಸಿದೆ. ಇಲ್ಲಿಯವರೆಗೆ ಎರಡೂ ದೇಶಗಳಲ್ಲಿ 2300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭಾರೀ ಭೂಕಂಪ ಭಾರೀ ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ ಈಗಾಗಲೇ 2300 ತಲುಪಿದೆ.
ಆಗ್ನೇಯ ಟರ್ಕಿ ಪ್ರದೇಶ ಮತ್ತು ಉತ್ತರ ಸಿರಿಯಾದಲ್ಲಿ ಸೋಮವಾರ ಮುಂಜಾನೆ ಭಾರಿ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.8ರಷ್ಟಿತ್ತು.
ಭೂಕಂಪದ ತೀವ್ರತೆಗೆ ಕೆಲವೇ ನಿಮಿಷಗಳಲ್ಲಿ ಬೃಹತ್ ಕಟ್ಟಡಗಳು ಕುಸಿದು ಬಿದ್ದಿವೆ. ಅವಶೇಷಗಳಡಿ ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಇನ್ನು ಈ ದುರಂತದಲ್ಲಿ 8000ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ರೆ, 5 ಸಾವಿರ ಮನೆಗಳು ನಾಶವಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಿರಿಯಾದ ರಾಷ್ಟ್ರೀಯ ಭೂಕಂಪ ಕೇಂದ್ರದ ಮುಖ್ಯಸ್ಥ ರಯೀದ್ ಅಹ್ಮದ್ ಅವರು ಸರ್ಕಾರಿ ಪರ ರೇಡಿಯೋಗೆ ಇದು “ಕೇಂದ್ರದ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಭೂಕಂಪ” ಎಂದಿದ್ದಾರೆ.
ತಾಯಂದಿರೇ ಎಚ್ಚರ ; ನಿಮ್ಮ ಮಕ್ಕಳಿಗೆ ‘ಹಾಲಿನ’ ಜೊತೆ ಈ ‘ಪಾದಾರ್ಥ’ಗಳನ್ನ ನೀಡಿದ್ರೆ ಅಪಾಯ ತಪ್ಪಿದ್ದಲ್ಲ
BIGG UPDATE : ನೃಪತುಂಗ ರಸ್ತೆಯಲ್ಲಿ ಕಾರು ಡಿಕ್ಕಿ ಪ್ರಕರಣ : ಇಬ್ಬರ ದುರ್ಮರಣ |Accident
OMG : ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ನಲ್ಲಿ ಬೈಕ್ ಸವಾರನ ಹುಚ್ಚಾಟ : ಮೈ ಜುಂ ಎನಿಸುವ ವಿಡಿಯೋ ವೈರಲ್ |VIDEO