ಮಥುರಾ (ಉತ್ತರ ಪ್ರದೇಶ): ಮತ್ತೊಂದು ಹಿಟ್ ಮತ್ತು ಡ್ರ್ಯಾಗ್ ಪ್ರಕರಣ ಬೆಳಕಿಗೆ ಬಂದಿದೆ. ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಉತ್ತರ ಪ್ರದೇಶದ ನೋಯ್ಡಾ ಕಡೆಗೆ ಚಲಿಸುತ್ತಿದ್ದ ಕಾರಿನ ಒಂದು ತುದಿಯಲ್ಲಿ ವ್ಯಕ್ತಿಯ ಶವ ಸಿಕ್ಕಿಬಿದ್ದಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಕಾರು ಆಗ್ರಾದಿಂದ ನೋಯ್ಡಾ ಕಡೆಗೆ ಹೋಗುತ್ತಿದ್ದಾಗ ಮಥುರಾದ ಮಂತ್‌ನಲ್ಲಿರುವ ಟೋಲ್ ಬೂತ್‌ನಲ್ಲಿ ವ್ಯಕ್ತಿಯೊಬ್ಬರ ದೇಹವು ಕಾರಿಗೆ ಸಿಲುಕಿರುವುದು ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಂದಿದೆ.
ದೆಹಲಿ ಮೂಲದ ವೀರೇಂದ್ರ ಸಿಂಗ್ ಎಂಬಾತ ಈ ಕಾರನ್ನು ಚಲಾಯಿಸುತ್ತಿದ್ದು, ಆತನನ್ನು ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. “ಕಳೆದ ರಾತ್ರಿ ಎಕ್ಸ್‌ಪ್ರೆಸ್‌ವೇಯಲ್ಲಿ ದಟ್ಟವಾದ ಮಂಜು ಇತ್ತು. ಆದ್ದರಿಂದ, ಅಪಘಾತಕ್ಕೆ ಒಳಗಾದ ವ್ಯಕ್ತಿ ತನ್ನ ಕಾರಿಗೆ ಸಿಲುಕಿಕೊಂಡಿರುವುದು ನನಗೆ ತಿಳಿದಿಲ್ಲ” ಎಂದು ಕಾರು ಚಾಲಕ ಹೇಳಿಕೊಂಡಿದ್ದಾನೆ. ಚಾಲಕನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಜನವರಿ 1 ರಂದು ದೆಹಲಿಯಲ್ಲಿ ಇಂತದ್ದೇ ಒಂದು ಘಟನೆ ನಡೆದಿತ್ತು. ಸ್ಕೂಟರ್ ಸವಾರಿ ಮಾಡುತ್ತಿದ್ದ 20 ವರ್ಷದ ಅಂಜಲಿ ಸಿಂಗ್‌ಗೆ ಕಾರೊಂದು ಡಿಕ್ಕಿ ಹೊಡೆದು ಹಲವಾರು ಕಿಲೋಮೀಟರ್‌ವರೆಗೆ ಎಳೆದೊಯ್ದಿತ್ತು. ನಂತ್ರ ,ಆಕೆ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.
BREAKING NEWS : ಇಂಡಿಗೋ ವಿಮಾನದಲ್ಲಿ ಮಹಿಳೆ ಅಸ್ವಸ್ಥ; ಜೋಧ್‌ಪುರದಲ್ಲಿ ತುರ್ತು ಭೂ ಸ್ಪರ್ಶ | IndiGo
BREAKING NEWS : ಡಿಕೆಶಿ ಕುಟುಂಬದ ಮಕ್ಕಳ ವಿಡಿಯೋ ದುರ್ಬಳಕೆ : 2 ಯುಟ್ಯೂಬ್ ವಾಹಿನಿಗಳ ವಿರುದ್ಧ ಕೇಸ್ ದಾಖಲು
BREAKING NEWS : ಇಂಡಿಗೋ ವಿಮಾನದಲ್ಲಿ ಮಹಿಳೆ ಅಸ್ವಸ್ಥ; ಜೋಧ್‌ಪುರದಲ್ಲಿ ತುರ್ತು ಭೂ ಸ್ಪರ್ಶ | IndiGo
BREAKING NEWS : ಡಿಕೆಶಿ ಕುಟುಂಬದ ಮಕ್ಕಳ ವಿಡಿಯೋ ದುರ್ಬಳಕೆ : 2 ಯುಟ್ಯೂಬ್ ವಾಹಿನಿಗಳ ವಿರುದ್ಧ ಕೇಸ್ ದಾಖಲು