ಬೆಂಗಳೂರು: ಇಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಕರ್ನಾಟಕ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಸಭೆ ನಡೆಸಿ, ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಚಿವರು ನೈಋತ್ಯ ರೈಲ್ವೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಸಂಪೂರ್ಣ ಪರಿಶೀಲನೆ ನಡೆಸಿದರು. 9 ಹೊಸ ಲೈನ್ ಯೋಜನೆಗಳು ಮತ್ತು 5 ದ್ವಿಪಥಿಕರಣಗೊಳಿಸುವ ಯೋಜನೆಗಳು ಸೇರಿದಂತೆ 14 ಮಹತ್ವದ ಯೋಜನೆಗಳ ಸುತ್ತ ಚರ್ಚೆಗಳು ಕೇಂದ್ರೀಕೃತವಾಗಿದ್ದವು. ಈ ಯೋಜನೆಗಳು ಒಟ್ಟು 1264 ಕಿಲೋಮೀಟರ್ ಹೊಸ ಮಾರ್ಗ ಮತ್ತು 707 ಕಿಲೋಮೀಟರ್ ದ್ವಿಪಥಿಕರಣಗೊಳಿಸುವಿಕೆಯನ್ನು ಒಳಗೊಂಡಿದ್ದು, 289 ಕಿಲೋಮೀಟರ್ ಹೊಸ ಮಾರ್ಗ ಮತ್ತು 502 ಕಿಲೋಮೀಟರ್ ಡಬ್ಲಿಂಗ್ ಲೈನ್ ಈಗಾಗಲೇ ಯಶಸ್ವಿಯಾಗಿ ಕಾರ್ಯಾರಂಭಗೊಂಡಿದೆ.

ಇದರಲ್ಲಿ ಐದು ಡಬಲ್-ಲೈನ್ ಯೋಜನೆಗಳು ಸೇರಿವೆ

1. ಹೊಟ್ಗಿ – ಕುಡ್ಗಿ – ಗದಗ 2. ಯಶವಂತಪುರ – ಚನ್ನಸಂದ್ರ 3. ಬೈಯ್ಯಪನಹಳ್ಳಿ – ಹೊಸೂರು 4. ಬೆಂಗಳೂರು – ವೈಟ್‌ಫೀಲ್ಡ್ 5. ಹೊಸಪೇಟೆ – ಹುಬ್ಬಳ್ಳಿ – ಲೋಂಡಾ – ತಿನೈಘಾಟ್ – ವಾಸ್ಕೋಡಿ ಗಾಮಾ.
9 ಒಂಬತ್ತು ಹೊಸ ಲೈನ ಯೋಜನೆಗಳು ಸೇರಿವೆ:

1. ತುಮಕೂರು – ಕಲ್ಯಾಣದುರ್ಗ ಮೂಲಕ ರಾಯದುರ್ಗ

. ತುಮಕೂರು – ಚಿತ್ರದುರ್ಗ – ದಾವಣಗೆರೆ

3. ಗಿಣಿಗೇರಾ-ರಾಯಚೂರು

4. ಬಾಗಲಕೋಟ-ಕುಡಚಿ

5. ಗದಗ – ವಾಡಿ

6. ಕಡೂರು – ಚಿಕ್ಕಮಗಳೂರು

7. ಶಿವಮೊಗ್ಗ ಶಿಕಾರಿಪುರ – ರಾಣೆಬೆನ್ನೂರು

8. ಬೆಳಗಾವಿ – ಕಿತ್ತೂರು ಮಾರ್ಗವಾಗಿ ಧಾರವಾಡ

9. ಹಾಸನ – ಬೇಲೂರು ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸಲು ರೈಲ್ವೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಮತ್ತು ಕೆ- ರೈಡ್ ಸೇರಿದಂತೆ ವಿವಿಧ ಮಧ್ಯಸ್ಥಗಾರರ ನಡುವಿನ ಸಹಯೋಗದ ಮಹತ್ವವನ್ನು ಸಚಿವರು ಒತ್ತಿ ಹೇಳಿದರು.

ಬಾಕಿ ಉಳಿದಿರುವ ಕಾಮಗಾರಿಗೆ ಭೂಸ್ವಾಧೀನಕ್ಕೆ ವೇಗ ನೀಡುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಮುಂಬರುವ ವರ್ಷಗಳಲ್ಲಿ ಎಲ್ಲಾ ಬಾಕಿ ಯೋಜನೆಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ರೈಲುಗಳ ವೇಗವನ್ನು ಹೆಚ್ಚಿಸಲು ಎಲ್ಲಾ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕುವ ಸರ್ಕಾರದ ಯೋಜನೆಯನ್ನು ಸಚಿವರು ವಿವರಿಸಿದರು. ಬೆಂಗಳೂರು ಸುತ್ತಮುತ್ತಲಿನ ಲೆವೆಲ್ ಕ್ರಾಸಿಂಗ್ ಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್, ಮುಖ್ಯ ಆಡಳಿತಾಧಿಕಾರಿ/ನಿರ್ಮಾಣ  ರಾಮಗೋಪಾಲ್ ಮತ್ತು ಇತರ ರೈಲ್ವೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

BREAKING : ಜಾರ್ಖಂಡ್’ನಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ; ನಾಲ್ವರು ನಕ್ಸಲರ ಹತ್ಯೆ, ಇಬ್ಬರ ಬಂಧನ

BREAKING : ಜಾರ್ಖಂಡ್’ನಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ; ನಾಲ್ವರು ನಕ್ಸಲರ ಹತ್ಯೆ, ಇಬ್ಬರ ಬಂಧನ

Share.
Exit mobile version