ಬಳ್ಳಾರಿ-ಹೊಸಪೇಟೆಯ 3-4ನೇ ರೈಲು ಮಾರ್ಗ, NH 167 ಗುಡೇಬೆಳ್ಳೂರು- ಮಹಬೂಬ್‌ ನಗರ ಮಾರ್ಗ ಮೇಲ್ದರ್ಜೆಗೆ ಕೇಂದ್ರ ಸಂಪುಟ ಅಸ್ತು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ 167ರ ಗುಡೇಬೆಳ್ಳೂರು-ಮಹಬೂಬ್‌ನಗರ ಮಾರ್ಗವನ್ನು ಮೇಲ್ದರ್ಜೆಗೇರಿಸಿ ಚತುಷ್ಪಥಗೊಳಿಸಲು ಅನುಮೋದನೆ ನೀಡಿರುವುದನ್ನು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ವಾಗತಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಕೇಂದ್ರ ಸಚಿವರು, ಇವೆರೆಡೂ ಅನುಮೋದನೆಗಳಿಂದ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಅನುಕೂಲ ಆಗುತ್ತದೆ ಎಂದು ತಿಳಿಸಿದ್ದಾರೆ. ಬಳ್ಳಾರಿ-ಹೊಸಪೇಟೆ ನಡುವಿನ … Continue reading ಬಳ್ಳಾರಿ-ಹೊಸಪೇಟೆಯ 3-4ನೇ ರೈಲು ಮಾರ್ಗ, NH 167 ಗುಡೇಬೆಳ್ಳೂರು- ಮಹಬೂಬ್‌ ನಗರ ಮಾರ್ಗ ಮೇಲ್ದರ್ಜೆಗೆ ಕೇಂದ್ರ ಸಂಪುಟ ಅಸ್ತು