ನವದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂನ ನಾಲ್ಕು ಜಮೀನುಗಳು ಇಂದು ಹರಾಜಾಗುತ್ತಿವೆ. ಈ ಹರಾಜು ಇಂದು ಸಫೆಮಾ ಕಚೇರಿಯಲ್ಲಿ ನಡೆಯಲಿದ್ದು, ಎಷ್ಟು ಮಂದಿ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಚ್ಚರಿಯ ಸಂಗತಿ ಎಂದರೆ ರತ್ನಗಿರಿ ಜಿಲ್ಲೆಯ ದಾವೂದ್’ನ ಈ ನಾಲ್ಕು ಫಾರ್ಮ್’ಗಳ ಮೀಸಲು ಬೆಲೆ ಕೇವಲ 19 ಲಕ್ಷ 21 ಸಾವಿರ ರೂಪಾಯಿ.
2020ರಲ್ಲಿ ದಾವೂದ್ ಅವರ ಪೂರ್ವಜರ ಭವನದ ಬಿಡ್ ಗೆದ್ದಿದ್ದ ದೆಹಲಿಯ ವಕೀಲರೂ ಇಂದಿನ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಅಜಯ್ ಶ್ರೀವಾಸ್ತವ ಅವರು 2020ರಲ್ಲಿ ಬಿಡ್‌ನಲ್ಲಿ ಗೆದ್ದಿದ್ದ ಮಹಲಿನಲ್ಲಿ ಸನಾತನ ಪಾಠಶಾಲೆಯನ್ನ ಪ್ರಾರಂಭಿಸಲಿದ್ದೇನೆ ಎಂದು ಹೇಳಿದ್ದಾರೆ.
ಎಲ್ಲಾ ಜಮೀನುಗಳ ಒಟ್ಟು ಬೆಲೆ 19,21,760 ರೂಪಾಯಿ.!
ಭೂಗತ ಪಾತಕಿ ದಾವೂದ್ ಇಬ್ರಾಹಿಂ ತಲೆಮರೆಸಿಕೊಂಡಿದ್ದಾನೆ, ಆದರೆ ಅವನ ಪೂರ್ವಜರ ಭೂಮಿ ಇನ್ನೂ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮುಂಬ್ಕೆ ಗ್ರಾಮದಲ್ಲಿದೆ. ಇದೀಗ ಸೇಫ್ಮಾ (ಸ್ಮಗ್ಲರ್ಸ್ ಅಂಡ್ ಫಾರಿನ್ ಎಕ್ಸ್ ಚೇಂಜ್ ಮ್ಯಾನಿಪ್ಯುಲೇಟರ್ ಆಕ್ಟ್) ಅಡಿಯಲ್ಲಿ ದಾವೂದ್’ನ 4 ಫಾರ್ಮ್’ಗಳು ಹರಾಜಾಗಿದ್ದು, ಎಲ್ಲಾ ಫಾರ್ಮ್’ಗಳಿಗೆ ಮೀಸಲಿಟ್ಟಿರುವ ಒಟ್ಟು ಬೆಲೆ ಕೇವಲ 19,21,760 ರೂಪಾಯಿ. ಅಂದ್ಹಾಗೆ, ಮುಂಬೈನಲ್ಲಿರುವ ದಾವೂದ್ ಇಬ್ರಾಹಿಂನ ಹಲವು ಆಸ್ತಿಗಳೂ ಇದಕ್ಕೂ ಮುನ್ನ ಹರಾಜಾಗಿವೆ. ಕೆಲವು ಮಾರಾಟವಾಗಿವೆ, ಕೆಲವು ಕಾನೂನು ತೊಂದರೆಗೆ ಸಿಲುಕಿವೆ.
‘ಪದಚ್ಯುತಿ ನಿರ್ಧಾರ ಸಿಎಂಗೆ ಮಾತ್ರ…’ : ತಮಿಳುನಾಡು ಸಚಿವ ‘ಸೆಂಥಿಲ್ ಬಾಲಾಜಿ’ಗೆ ‘ಸುಪ್ರೀಂ’ನಿಂದ ಬಿಗ್ ರಿಲೀಫ್
‘KSDL ಕಾರ್ಖಾನೆ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ‘5 ಲಕ್ಷ ವಿಮೆ’ ಸೌಲಭ್ಯ – ಸಚಿವ ಎಂ.ಬಿ ಪಾಟೀಲ