ಉಕ್ರೇನ್ :  ಉಕ್ರೇನ್  ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕಗೆ ತೆರಳಿದ್ದಾರೆ.ಈ ಕುರಿತಂತೆ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ಉಕ್ರೇನ್‌- ರಷ್ಯಾದ ಆಕ್ರಮಣದ ನಂತರ ಝೆಲೆನ್ಸ್ಕಿ ಮೊದಲ ಭೇಟಿಯಾಗಿದೆ.

ಉಕ್ರೇನ್‌ ಸ್ಥಿತಿಸ್ಥಾಪಕತ್ವ ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸಲು ನಾನು ಯುಎಸ್‌ಗೆ ಹೋಗುತ್ತಿದ್ದೇನೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅಧ್ಯಕ್ಷರು (ಯುಎಸ್ ಅಧ್ಯಕ್ಷ ಜೋ ಬಿಡೆನ್) ಮತ್ತು ನಾನು ಉಕ್ರೇನ್ ಮತ್ತು ಯುಎಸ್ ನಡುವಿನ ಸಹಕಾರವನ್ನು ಚರ್ಚಿಸುತ್ತೇವೆ. ಈ ವೇಳೆ ಹಲವು ದ್ವಿಪಕ್ಷೀಯ ಸಭೆಗಳನ್ನು ನಡೆಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಉಕ್ರೇನ್‌ನಲ್ಲಿ ಮಂಗಳವಾರ ರಾತ್ರಿ ಮಾಡಿದ ಭಾಷಣದಲ್ಲಿ ಝೆಲೆನ್ಸ್ಕಿ, ದೇಶದಲ್ಲಿ ಚಳಿಗಾಲ ಪ್ರವೇಶಿಸುತ್ತಿದ್ದಂತೆ ಹೆಚ್ಚಿನ ಸಹಾಯ ಪಡೆಯುವುದು ನಿರ್ಣಾಯಕ ಎಂದು ಹೇಳಿದ್ದರು.

ಉಕ್ರೇನ್ ನಲ್ಲಿ ನಾಗರರಿಕರನ್ನು ಮತ್ತು ದೇಶದಲ್ಲಿನ ನಿರ್ಣಾಯಕ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ರಷ್ಯಾ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುತ್ತಿದೆ. ಪರಿನಾಮ ಉಕ್ರೇನ್ ನಲ್ಲಿ  ವಿದ್ಯುತ್ ಮತ್ತು ನೀರಿನ ಪೂರೈಕೆ ಕಡಿತ  ಉಂಟುಮಾಡುತ್ತಿದೆ.

ಮಂಗಳವಾರ ರಾಜಧಾನಿ ಕೈವ್‌ನಲ್ಲಿ, ವಿದ್ಯುತ್ ಉತ್ಪಾದನೆಯು ಅಗತ್ಯಕ್ಕಿಂತ 50 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ನಗರದ ಶಕ್ತಿಯನ್ನು ಒದಗಿಸುವ ಇಂಧನ ಪೂರೈಕೆದಾರ YASNO ನ ಸಿಇಒ ಸೆರ್ಹಿ ಕೊವಾಲೆಂಕೊ ಫೇಸ್‌ಬುಕ್‌ನಲ್ಲಿ ತಿಳಿಸಿದ್ದರು.

BIG NEWS: ಶಿಕ್ಷಕರ 17 ಅಗತ್ಯ ಸೇವೆಗಳು ಆನ್ ಲೈನ್: ಕಡ್ಡಾಯವಾಗಿ ಪ್ರಸ್ತಾವನೆಯ ಕ್ರಮ ಸಂಖ್ಯೆ ನಮೂದಿಸಲು ಶಿಕ್ಷಣ ಇಲಾಖೆ ಸೂಚನೆ

ಕೊರೊನಾ ಭೀತಿ : 3 ನೇ ಡೋಸ್ ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ನಿಗಾ : ಸಚಿವ ಸುಧಾಕರ್

BIGG NEWS : ಗದಗ ಜಿಲ್ಲೆಯ ಕೈಗಾ-ಇಳಕಲ್ ಹೆದ್ದಾರಿ ದುರಸ್ತಿಗೆ ಆಗ್ರಹ : ಟೈರ್​ಗೆ ಬೆಂಕಿ ಹಚ್ಚಿ, ಲಕ್ಷ್ಮೇಶ್ವರ ಸಂಪೂರ್ಣ ಬಂದ್

Share.
Exit mobile version