ಮಾಸ್ಕೋ: ಯುದ್ಧದ ಸಮಯದಲ್ಲಿ, ಉಕ್ರೇನಿಯನ್ ಸೈನಿಕನು ರಷ್ಯಾದ ಸೈನ್ಯಕ್ಕೆ ಶರಣಾಗುವ ವೇಳೇಯಲ್ಲಿ ಆತ ತನ್ನ ಸ್ವಂತ ಸೈನಿಕರಿಂದ ಕೊಲ್ಲಲ್ಪಟ್ಟ ಘಟನೆ ನಡೆದಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಸೈನಿಕನೊಬ್ಬ ರಷ್ಯಾದ ಮಿಲಿಟರಿಯತ್ತ ಡ್ರೋನ್ ಅನ್ನು ಹಿಂಬಾಲಿಸುತ್ತಿರುವುದನ್ನು ಕಾಣಿಸುತ್ತಿದೆ.

ಈ ಡ್ರೋನ್ ರಷ್ಯಾದ ಸೇನೆಗೆ ಸೇರಿದ್ದು ಮತ್ತು ಅದು ಸೈನಿಕನನ್ನು ತನ್ನ ಬಳಿಗೆ ಕರೆದಿದೆ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ, ಸೈನಿಕನು ಬಿಳಿ ಧ್ವಜವನ್ನು ಬೀಸುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಆತ ರಷ್ಯಾದ ಸೈನ್ಯವನ್ನು ತಲುಪುವ ಮೊದಲು, ಾತ ಡ್ರೋನ್ ದಾಳಿಯಲ್ಲಿ ಸಾಯುತ್ತಾನೆ. ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

Share.
Exit mobile version